ಶನಿವಾರ, ನವೆಂಬರ್ 28, 2015

ಹಾವುಗಳ ಪರಿಚಯ

ಭಾರತದಲ್ಲಿನ ವಿಷಪೂರಿತ ಹಾವುಗಳು-
 .ಹಾವುಗಳು ಈ ಪದ ಕೇಳಿದರೆ ಬೆಚ್ಚಿ ಬೀಳುವ ಜನರು ಹೆಚ್ಚು ನಮ್ಮ ದೇಶದಲ್ಲಿ
.ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು
2 ,5೦,೦೦೦ ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ.ಇದರಲ್ಲಿ 5೦,೦೦೦ ಜನರು ಪ್ರಾಣ ಕಳೆದುಕೊಳ್ಳುತ್ತಾರೆ
.ಈ ಮಾಹಿತಿಯನ್ನು ನಾನು ಹಾವುಗಳ ಬಗ್ಗೆ ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟು ಹಾಕಲು ಹೇಳುತ್ತಿಲ್ಲ
.ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ಇರುವ ಒಂದು ಭಾವನೆ ಎಂದರೆ ಹಾವುಗಳು ಎಂದರೆ ಕಚ್ಚಿ ಸಾಯಿಸುವ ಜೀವಿಗಳು ಎಂದು.ಈ ವಿಚಾರ ತಪ್ಪು.ಭಾರತದಲ್ಲಿ ಇರುವ ಹಲವಾರು ಹಾವುಗಳ ಜಾತಿಯಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ನನ್ನ ಇಂದಿನ ಪೋಸ್ಟ್
.ನೀವು ಈ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತಿರಿ....ಭಾರತದಲ್ಲಿ ಇರುವ ವಿಷಪೂರಿತ ಹಾವುಗಳ ಜಾತಿ ಎಷ್ಟು ಗೊತ್ತೇ ? ಕೇವಲ 4
.ಹೌದು ನಮ್ಮ ದೇಶದಲ್ಲಿ ಈ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ.ಈ 4 ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತನೆಯೇ ಹೊರತು (ಅಗತ್ಯ ಚಿಕೆತ್ಸೆ ಕೊಡಿಸದಿದ್ದಾಗ ) ಬೇರೆ ಎಲ್ಲಾ ಹಾವುಗಳು ವಿಷರಹಿತ
.ಈ 4 ಜಾತಿಯ ಹಾವುಗಳು ಯಾವುವೆಂದರೆ
1 .King Cobra ಅಥವಾ ಕಾಳಿಂಗ
2 .Cobra ಅಥವಾ ನಾಗರ ಹಾವು
3 .Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ
4 .Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು


-King Cobra ಅಥವಾ ಕಾಳಿಂಗ -
ಸಾಮಾನ್ಯವಾಗಿ ಪಶ್ಚಿಮ ಘಟ್ಟದ ತಂಪು ಪ್ರದೇಶಗಳಲ್ಲಿ ಇವು ಕಂಡು ಬರುತ್ತವೆ
.ನಾಗರ ಹಾವಿಗಿಂತ ಉದ್ದ ಬೆಳೆಯುವ ಇವುಗಳನ್ನು ಗುರುತು ಹಿಡಿಯುವುದು ಸುಲಭ
.ಹಗಲು ಹೊತ್ತು ಸಂಚರಿಸುವ ಇವುಗಳು ಜನ ವಸತಿ ಪ್ರದೇಶದ ಬಳಿ ಬರುವುದು ವಿರಳ
.ಇದರ ವಿಷಕ್ಕೆ ಔಷದಿ ಇಲ್ಲ .ಇದರ ಕಡಿತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ಬಹಳ ಕಡಿಮೆ



-Cobra ಅಥವಾ ನಾಗರ ಹಾವು-


.ಸಾಮಾನ್ಯವಾಗಿ ನಮ್ಮೆಲ್ಲರಿಗೂ ಚಿರ ಪರಿಚಿತ ಹಾವು ಇದು
.ಭಾರತದೆಲ್ಲೆಡೆ ಕಂಡು ಬರುತ್ತವೆ.ಹಗಲು ಹೊತ್ತಿನ ಜೀವಿಗಳಾದ ಇವುಗಳ ಚಲನೆ ನಿಧಾನ
.ಇದರ ವಿಷಕ್ಕೆ ಔಷದಿ ಲಭ್ಯವಿದೆ


-Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ -

 (Image Courtesy-sarah-care.com)
 .ರಾತ್ರಿ ಹೊತ್ತು ಮಾತ್ರ ಕಾರ್ಯ ಪ್ರವೃತ್ತ ವಾಗುವ ಈ ಹಾವು ಜನ ವಸತಿಯ ಸ್ಥಳಗಳಲ್ಲೊ ಕಂಡು ಬರುತ್ತವೆ
.ಗದ್ದೆ ,ತೋಟಗಳಲ್ಲಿ ಇಲಿ ಮತ್ತಿತರ ಚಿಕ್ಕ ಪ್ರಾಣಿಗಳನ್ನು ಭೇಟೆಯಾಡಲು ಹೊಂಚು ಹಾಕಿ ಕುಳಿತಿರುತ್ತದೆ
.ಇವುಗಳ ಮೈ ಮೇಲೆ ಕನ್ನಡಿ ಆಕಾರದ ಪಟ್ಟೆಗಳು ಕಂಡು ಬರುವುದರಿಂದ ಇವನ್ನು ಕನ್ನಡಿ ಹಾವು ಎನ್ನುತ್ತಾರೆ
.ತಲೆಯು ತ್ರಿಕೂನಾಕಾರದಲ್ಲಿರುತ್ತದೆ
.ಮೈ ಮೇಲೆ ಈ ಹಾವಿನ ತರಹದಲ್ಲೇ ಅಕಾರ ಇರುವ ಆದರೆ ತಲೆ ಮಾತ್ರ ತ್ರಿಕೂನಾಕಾರದಲ್ಲಿರದ  ವಿಷರಹಿತ ಹಾವುಗಳನ್ನು ಕೆಲವರು ಕನ್ನಡಿ ಹಾವೆಂದು ತಪ್ಪು ತಿಳಿದು ಸಾಯಿಸುತ್ತಾರೆ
.ಭಾರತದಲ್ಲಿ viper ಜಾತಿಯ ವಿಷಪೂರಿತ ಹಾವುಗಳಲ್ಲಿ Russell's Viper ಹಾಗು Saw Scaled Viper ಗಳು ಪ್ರಮುಖವಾದವು .ಸಾಮಾನ್ಯವಾಗಿ ಎರಡರ ತಲೆಯೂ ತ್ರಿಕೂನಕಾರದಲ್ಲಿದ್ದು ಮೈಮೇಲಿನ ಅಕಾರ ವ್ಯತ್ಯಾಸವಿರುತ್ತದೆ
.ಹೆಸರೇ ಹೇಳುವಂತೆ Saw Scaled Viper ಗಳ ಮೈ Scales ಗಳಿಂದ ಕೂಡಿರುತ್ತವೆ
.ಇದರ ವಿಷ ಅಪಾಯಕಾರಿಯಾಗಿದ್ದು kidney ವ್ಯಪಲ್ಯ ತಂದೊಡ್ಡುತ್ತದೆ



-Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು -

(Image Courtesy-sarah-care.com)
.ಕಪ್ಪು ಬಣ್ಣದ ಮೈ ಮೇಲೆ ತೆಳ್ಳಗಿನ band ಗಳು ಕಂಡು ಬರುತ್ತವೆ
.5 ಅಡಿವರೆಗೆ ಬೆಳೆಯಬಲ್ಲವು
.viper ನಂತೆಯೇ ಇವೂ ಕೂಡ ರಾತ್ರಿ ಹೊತ್ತು ಮಾತ್ರ ಕಾರ್ಯ ಪ್ರವೃತ್ತವಾಗುವ ಜೀವಿಗಳು
.ಕಾಡು,ಹುಲ್ಲುಗಾವಲು,ಗದ್ದೆ,ತೋಟ ಗಳ ಹತ್ತಿರ ಬೇಟೆಯಾಡಲು ಹೊಂಚು ಹಾಕಿ ಕುಳಿತಿರುತ್ತವೆ
.ನೋಡಲು ಈ ಹಾವಿನ ತರಹವೇ ಇರುವ ಇನ್ನೊಂದು ಹಾವು banded wolf snake ಅಥವಾ ಕಟ್ಟು ತೋಳ ಹಾವು.ಈ ಕಟ್ಟು ತೋಳ ಹಾವು ವಿಷ ರಹಿತ ಹಾವಾಗಿದ್ದು ವಿಷ ಪೂರಿತ krait ಹಾವುಗಳಿಗಿರುವಂತೆ ಮೈ ಮೇಲೆ ದಪ್ಪ band ಇದ್ದು ತಲೆ ಚಪ್ಪಟೆಯಾಗಿರುತ್ತದೆ
.krait ನ ವಿಷ ಅತ್ಯಂತ ಅಪಾಯಕಾರಿ.ಇದು ಕಚ್ಚಿದಾಗ ನೋವು ಗೊತ್ತಾಗುವುದಿಲ್ಲ ಹಾಗಾಗಿಯೇ ಇದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಿದೆ

.ಮೇಲೆ ತಿಳಿಸಿರುವ 4 ಜಾತಿಯ ಹಾವುಗಳು ಮಾತ್ರ ನಮ್ಮ ದೇಶದಲ್ಲಿ ಕಂಡು ಬರುವ ವಿಷ ಪೂರಿತ ಹಾವುಗಳು
.ಈ ವಿಷಪೂರಿತ ಹಾವುಗಳು ಕೂಡ ಯಾರಿಗೂ ಸುಮ್ಮನೆ ಸುಮ್ಮನೆ ಕಚ್ಚುವುದಿಲ್ಲ
ನಾವು ಅಚಾನಕ್ಕಾಗಿ ಅವುಗಳನ್ನು ತುಳಿದಾಗ ಅಥವಾ ಬೇಕೆಂದೇ ಹಿಂಸೆ ಮಾಡಿದಾಗ ಮಾತ್ರ ಅವುಗಳ ಪ್ರಾಣ ಉಳಿಸಿಕೊಳ್ಳಲು ಅವು ಆಕ್ರಮಣಕ್ಕಿಳಿಯುತ್ತವೆ
.ನಾವು ನಮ್ಮ ಜಾಗ್ರತೆಯಲ್ಲಿದ್ದರೆ ಹಾವುಗಳಿಂದ ಕಡಿತಕ್ಕೊಳಗಾಗುವ ಸಂದರ್ಭವೇ ಬರುವುದಿಲ್ಲ
.ಅಕಸ್ಮಾತ್ ಈ ಹಾವುಗಳು ದಾರಿ ತಪ್ಪಿ ನಿಮ್ಮ ಮನೆಯ ಸುತ್ತ ಮುತ್ತ ಕಾಣಿಸಿಕೊಂಡರೆ ನೀವು ಹೆದರಿ ಹಿಂಸೆ ಮಾಡದೆ ಉರಗ ರಕ್ಷಕರನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಿಸಿ
.ಕೆಲವೊಮ್ಮೆ ಎಷ್ಟೋ ವಿಷ ರಹಿತ ಹಾವುಗಳನ್ನು ಜನ ವಿಷಪೂರಿತವೆಂದು ತಿಳಿದು ಹೊಡೆದು ಕೊಲ್ಲುತ್ತಾರೆ.ನಿಜಾಂಶ ಗೊತ್ತಿರುವ ನಾವುಗಳು ಅವರಿಗೆ ತಿಳಿ ಹೇಳಿ ಹಾವುಗಳನ್ನು ರಕ್ಷಿಸಬೇಕಿದೆ
.ಪ್ರಕೃತಿ ವಿಷರಹಿತ ಹಾವುಗಳಿಗೂ,ವಿಷ ಪೂರಿತ ಹಾವುಗಳಿಗೂ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಅವುಗಳದ್ದೇ ಆದ ಒಂದು ರಕ್ಷಣಾ ತಂತ್ರ ವನ್ನು ಕರುಣಿಸಿರುತ್ತದೆ.ಯಾವಾಗ ತಮ್ಮ ಪ್ರಾಣಕ್ಕೆ ಸಂಚಕಾರ ಬಂದಿದೆ ಅಂತ ಅನ್ನಿಸಿದಾಗ ಮಾತ್ರ ಅವು ಆ ರಕ್ಷಣಾ ತಂತ್ರ ವನ್ನು ಬಳಸಿಕೊಳ್ಳುತ್ತವೆ
.ಆದರೆ ಮಾನವ ಎಂಬ ವಿಷಪೂರಿತ ಜೀವಿ ಎಲ್ಲ ಸಂದರ್ಭದಲ್ಲೂ ವಿಷವನ್ನು ಕಕ್ಕುತ್ತಲೇ ಇರುತ್ತಾನೆ........

-ಹಾವುಗಳನ್ನು ರಕ್ಷಿಸಿ -



-ಪ್ರಕೃತಿಯನ್ನು ಉಳಿಸಿ-
ಹಾವು






ವೈಜ್ಞಾನಿಕ ವರ್ಗೀಕರಣ e

◾Alethinophidia Nopcsa, 1923
◾Scolecophidia Cope, 1864

World distribution of snakes.svg
Approximate world distribution of snakes, all species
ಹಾವು ಒಂದು ಉರಗ. ಸರೀಸೃಪ ಜಾತಿಗೆ ಸೇರಿದ ಪ್ರಾಣಿ. ಕಶೇರುಖ (ಬೆನ್ನು ಉರಿ ಮೂಳೆ) ಗುಂಪಿನ ಈ ಪ್ರಾಣಿಗೆ ಕಾಲುಗಳಿಲ್ಲ, (ಆದರೆ ಬೇರೆ ಜಾತಿಯ ಸರೀಸೃಪಗಳಿಗೆ ಇರುತ್ತವೆ.)ತೆವಳುತ್ತಾ ನಡೆಯುವ ಈ ಪ್ರಾಣಿಗಳು ಮಾಂಸಾಹಾರಿಗಳು.


ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ (ಕಿಂಗ್ ಡಮ್): ಪ್ರಾಣಿಗಳು
ವಿಭಾಗ (ಫಾಯ್ ಲಮ್):ಕಾರ್ಡೇಟ
ಉಪ ವಿಭಾಗ: ಕಶೇರುಖ
ವರ್ಗ (ಕ್ಲಾಸ್): ಸರೀಸೃಪಗಳು
ಗಣ(Order): ಸ್ಕ್ವಾಮಾಟ

 ಹಾವು
ಉಗಮ
ಹಾವುಗಳ ಪಳೆಯುಳಿಕೆಗಳು ದೊರೆಯುವುದು ಅಪರೂಪ.ದೊರೆತ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಎಂದರೆ ಸುಮಾರು ೧೧೨ ರಿಂದ ೯೪ ಮಿಲಿಯ ವರ್ಷಗಳಷ್ಟು ಪ್ರಾಚೀನವಾದುದು.[೧] ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ. [೨]:11[೩] ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ.ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ,ಸಮುದ್ರ ಹಾಗೂ ಸುಮಾರು ೧೬೦೦೦ ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ.[೩][೪] ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ.ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ,ಸಮುದ್ರ ಹಾಗೂ ಸುಮಾರು ೧೬೦೦೦ ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ.[೩][೪]
ಅನಕೊಂಡ
ಇದು ದಕ್ಷಿಣ ಅಮೇರಿಕಾ ದಲ್ಲಿ ಹೆಚ್ಚಾಗಿ ಕಂಡು ಬರುವ .ಎನೆಕ್ಟ್‌ಸ್ ಪ್ರಜಾತಿಗೆ ಸೇರಿದ ಎರಡು ಜಾತಿಯ ಹಾವುಗಳು.ಇವುಗಳು ಪ್ರಪಂಚದ ಅತೀ ದೊಡ್ಡ ಹಾವುಗಳು. ಕೆಲವು ಹಾವುಗಳು ೯ ಮೀಟರ್ ನಷ್ಟು ಉದ್ದವಾಗಿದ್ದರೆ ಸರಾಸರಿ ಹಾವುಗಳು ೪.೫ ಮೀಟರ್‌ಗೆ ಕಡಿಮೆ ಇರುವುದಿಲ್ಲ. ನಸು ಹಸಿರು ಬಣ್ಣ ಹೊಂದಿದ್ದು ಮೈ ಮೇಲೆ ದೊಡ್ಡದಾದ ಕಪ್ಪು ಚುಕ್ಕಿಗಳು ಇರುತ್ತವೆ.ಬೇರೆ ಹಾವುಗಳಂತೆ ಮೊಟ್ಟೆ ಇಡದೆ ನೇರವಾಗಿ ಮರಿಗಳನ್ನಿಡುವುದು ಇದರ ವೈಶಿಶ್ಟ್ಯ. ಹಕ್ಕಿಗಳು ಹಾಗೂ ಸಣ್ಣ ಪ್ರಾಣಿಗಳು ಇದರ ಆಹಾರ. ತನ್ನ ಬೇಟೆಯನ್ನು ಸುತ್ತುವರಿದು ಉಸಿರುಕಟ್ಟಿಸಿ ಸಾಯಿಸುತ್ತವೆ. ಕೆಲವೊಮ್ಮೆ ಕಚ್ಚಿದರೂ ವಿಷವಿರುವುದಿಲ್ಲ
ಕಾಳಿಂಗ ಸರ್ಪ




King Cobra





ವೈಜ್ಞಾನಿಕ ವರ್ಗೀಕರಣ
Kingdom: Animalia
Phylum: Chordata
Class: Reptilia
Order: Squamata
Suborder: Serpentes
Family: Elapidae
Genus: Ophiophagus
Species: O. hannah

ಕಾಳಿಂಗ ಸರ್ಪದ ಬಾಹ್ಯ ಜೀವನ
◾ಕಾಳಿಂಗ ಸರ್ಪವು ನಾಗರಹಾವಿನ ಗುಂಪಿಗೆ ಸೇರಿಲ್ಲ. ಹಾಗೆಯೇ ಕಾಳಿಂಗ ಸರ್ಪವು ತನ್ನದೇ ಆದ ಜೀವಿ ಕುಲದ ಗುಂಪುನ್ನು ಹೊಂದಿದೆ. ಇದರ ಕುತ್ತಿಗೆಯ ಗಾತ್ರ ಮತ್ತು ಪ್ರಕಾರದಲ್ಲಿನ ವೈವಿಧ್ಯಗಳಿಂದಾಗಿ ನಾಗರಹಾವುಗಳಿಗಿಂತ ಭಿನ್ನವಾಗಿವೆ. ಈ ಲಕ್ಷಣಗಳ ಅರಿವುಗಳ ಮೂಲಕ ಕಾಳಿಂಗ ಸರ್ಪವನ್ನು ಗುರುತಿಸಬಹುದು. ಕಾಳಿಂಗ ಸರ್ಪಗಳು ಇತರ ನಾಗರಹಾವುಗಳಿಗಿಂತ ದೊಡ್ಡದಾಗಿದ್ದು, ಇವುಗಳ ಕುತ್ತಿಗೆಯಲ್ಲಿ "^" ಸಂಕೇತದಂತಹ ಪಟ್ಟೆಯಿರುವುದು. ಆದರೆ ಉಳಿದ ನಾಗರಹಾವುಗಳಲ್ಲಿ ಎರಡು ಅಥವಾ ಒಂದು ಕಣ್ಣಿನಾಕಾರ ಸಂಕೇತಿಸುವ ಪಟ್ಟೆಯಿರುವುದು.
◾ಕಾಳಿಂಗ ಸರ್ಪದ ಜೀವ ಸಂಕುಲದ ಹೆಸರು ಒಫಿಯೊಫಗಸ್‌ ಆಗಿದ್ದು, ಇದರ ಅರ್ಥ "ಹಾವು-ಭಕ್ಷಕ" ಎಂದಾಗಿದೆ. ಇಲಿ ಹಾವು, ತಮ್ಮ ಆಹಾರಕ್ಕೆ ತಕ್ಕಂತಹ ದೊಡ್ಡ ಗಾತ್ರದ ಹೆಬ್ಬಾವುಗಳು ಮತ್ತು ಇತರ ವಿಷಪೂರಿತ ಹಾವುಗಳು (ಬಣ್ಣ,ಬಣ್ಣದ ಪಟ್ಟೆಯುಳ್ಳ(ಬಹುರಂಗಿ) ಹಾವು, ನಾಗರಹಾವು ಮತ್ತು ತನ್ನದೇ ಜಾತಿಯ ಚಿಕ್ಕ ಹಾವುಗಳು) ಸೇರಿದಂತೆ ಇತರ ಹಾವುಗಳು ಕಾಳಿಂಗ ಸರ್ಪದ ಆಹಾರ ಮೂಲವಾಗಿವೆ.
◾ಕಾಳಿಂಗ ಸರ್ಪದ ವಿಷವು ಮೂಲತಃ ನಿರೊಕಾಕ್ಸಿಕ್‌(ನೇರವಾಗಿ ಮಾನವನ ನರಮಂಡಲಕ್ಕೆ ವಿಷ ಸ್ಪ್ರುರಿಸುವ) ಆಗಿದ್ದು, ಒಂದೇ ಕಡಿತಕ್ಕೆ ಒಬ್ಬ ಮನುಷ್ಯನನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ.[೨] ಒಂದು ಕಡಿತದಿಂದ ಸಾವಿನ ಪ್ರಮಾಣ ಅತಿ ಗರಿಷ್ಠ,೭೫%[೨]ರಷ್ಟು [೩][೪] ಎನ್ನಲಾಗಿದ್ದು, ಅಥವಾ ಕಡಿಮೆಯೆಂದರೆ ೩೩%ರಷ್ಟು ಕಾಣಬರುತ್ತದೆ.[೫]ಚಿಕಿತ್ಸೆಯನ್ನಾಧರಿಸಿದಂತೆ ಇದರ ಪ್ರಮಾಣ ಇಳಿಮುಖವಾಗುತ್ತದೆ. ಈ ಹಾವುಗಳು ಏಷ್ಯಾದ ಅತಿ ಹೆಚ್ಚು ಅಪಾಯಕಾರಿ ಹಾವುಗಳಲ್ಲಿ ಒಂದಾಗಿವೆ.

ಬದುಕಿನ ಚಿತ್ರಣದ ಕಿರುಪರಿಚಯ
◾ಕಾಳಿಂಗ ಸರ್ಪವು ಉದ್ದದ ಮತ್ತು ಬಲಯುತ ಹಾವಾಗಿದೆ. ಇದು ಸರಾಸರಿ ೩.೬–೪ ಮೀಟರ್‌ನಷ್ಟು (೧೨–೧೩ ಅಡಿ) ಉದ್ದವಿದ್ದು, ಸುಮಾರು ೬ ಕಿಲೋಗ್ರಾಮ್‌ನಷ್ಟು (೧೩.೨ ಪೌಂಡ್‌ಗಳು) ತೂಕ ಹೊಂದಿರುವುದು. ವಿವಿಧ ಜಾತಿಯ ಕಾಳಿಂಗ ಸರ್ಪಗಳನ್ನು ಲಂಡನ್‌ ಮೃಗಾಲಯದಲ್ಲಿ ಬಂಧಿಸಿಡಲಾಗಿತ್ತು.ಎರಡನೇ ಮಹಾಯುದ್ಧದ ಕಾರಣದಿಂದ ಅವುಗಳು ಸಾಯುವ ಮೊದಲು ೫.೭ ಮೀಟರ್‌ನಷ್ಟು (೧೮.೮ ಅಡಿ) ಬೆಳೆದಿದ್ದವು ಎಂದು ಪ್ರಾಣಿ ಸಂಗ್ರಹಾಲಯದವರು ಹೇಳುತ್ತಾರೆ.[೬] ಕಾಳಿಂಗ ಸರ್ಪಗಳು ದೊಡ್ಡ ಗಾತ್ರದಲ್ಲಿದ್ದರೂ, ವೇಗವಾಗಿ ಚಲಿಸಬಲ್ಲವಾಗಿದ್ದು, ಚುರುಕಾಗಿರುತ್ತವೆ. ಇವು ಕಡುಹಸಿರು, ಕಂದು ಅಥವಾ ಕಪ್ಪು ಬಣ್ಣದ ಚರ್ಮ ಹೊಂದಿದ್ದು, ದೇಹದ ಕೆಳಭಾಗದಲ್ಲಿ ಮಸುಕಾದ ಹಳದಿ ಬಣ್ಣ ಹೊಂದಿರುತ್ತವೆ. ಹಾವಿನ ಹೊಟ್ಟೆಯ ಭಾಗವು ಕೆನೆಹಾಲಿನ ಬಣ್ಣ ಅಥವಾ ಮಸುಕಾದ ತಿಳಿ ಹಳದಿ ಬಣ್ಣ ಹೊಂದಿರುತ್ತದೆ.
◾ಅಲ್ಲದೇ ಇದು ಮೃದುವಾಗಿರುವುದು. ಒಂದು ಪ್ರೌಢ ಕಾಳಿಂಗ ಸರ್ಪದ ತಲೆಯು ದೊಡ್ಡ ಗಾತ್ರ ಮತ್ತು ತೂಕ ಹೊಂದಿರುವಂತೆ ಕಾಣಿಸುವುದು. ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಬೇಟೆಯನ್ನು ನುಂಗಲು ಬಾಯಿ ಭಾಗದ ದವಡೆ ಅಗಲಿಸುವ ಸಾಮರ್ಥ್ಯ ಹೊಂದಿವೆ. ಇದು ಪ್ರೋಟೆರೊಗ್ಲಿಫ್‌(ಒಂದೇ ಸಮರೂಪದ) ದಂತರಚನೆ ಹೊಂದಿದೆ.
◾ಅಂದರೆ ಇವು ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ, ಸ್ಥಿರ ವಿಷದ ಹಲ್ಲುಗಳನ್ನು ಹೊಂದಿದೆ. ಇದು ಚರ್ಮದಡಿಯಲ್ಲಿದ್ದು ಪಿಚಕಾರಿಯಂತೆ ಬೇಟೆಯ ಶರೀರದೊಳಗೆ ವಿಷ ಪ್ರವಹಿಸುವಂತೆ ಮಾಡುತ್ತದೆ. ಹೆಣ್ಣು ಹಾವಿಗಿಂತ ಗಂಡು ಹಾವು ಗಾತ್ರದಲ್ಲಿ ದೊಡ್ಡದು ಮತ್ತು ದಪ್ಪನಾಗಿರುವುದು.ವಿಷದ ಹಲ್ಲುಗಳೂ ದೊಡ್ಡದಾಗಿರುತ್ತವೆ. ಕಾಳಿಂಗ ಸರ್ಪದ ಸರಾಸರಿ ಜೀವಿತಾವಧಿ ಸುಮಾರು ೨೦ ವರ್ಷಗಳು.
ಆವಾಸ ಸ್ಥಾನ
◾ಕಾಳಿಂಗ ಸರ್ಪವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತಿದ್ದವು. ಆದರೆ ಅವುಗಳು ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಇವುಗಳು ಎತ್ತರದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.[೧][೭] ಹೆಚ್ಚಾಗಿ ಸರೋವರ ಮತ್ತು ಹಳ್ಳಗಳು ಆಸುಪಾಸಿನ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ.
◾ಅರಣ್ಯನಾಶದಿಂದಾಗಿ ಕಾಳಿಂಗ ಸರ್ಪದ ಸಂಖ್ಯೆಯು ಕಡಿಮೆಯಾಗುತ್ತಿದೆ. ಆದರೆ ಇದು ಅಳಿವಿನಂಚಿನಲ್ಲಿರುವ ಹಾವುಗಳಂತೆ IUCNನ ಪಟ್ಟಿಯಲ್ಲಿ ದಾಖಲಾಗಿಲ್ಲ. ಇದು ಕೇವಲ ದಾಖಲೆಗಳಲ್ಲಿ ಅನುಬಂಧ II ಪ್ರಾಣಿಗಳ ವರ್ಗದಲ್ಲಿ ದಾಖಲಾಗಿದೆ.[೮]

ಬೇಟೆ
◾ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಸೀಳು ನಾಲಿಗೆಗಳ ಮೂಲಕ ರಸಾಯನಿಕ ಸಂಕೇತ (“ವಾಸನೆ”) ಪಡೆಯುವವು. ಶರೀರದ ಸೂಕ್ಷ್ಮ ಭಾಗದಿಂದ ವಾಸನೆ ಗ್ರಹಿಸಿ, ತಮ್ಮ ಬಾಯಿಯ ಮೇಲ್ಗಡೆಯಿರುವ ವಿಶೇಷ ಸಂವೇದನ ಗ್ರಹಣ ಶಕ್ತಿಗೆ ಜಕೋಬ್ಸನ್‌ರ (ಎಂಬ)ಅಂಗ)ದ ಮೂಲಕ ಬೇಟೆಯ ಇರುವಿಕೆಯ ಮಾಹಿತಿಯನ್ನು ವರ್ಗಾಯಿಸುತ್ತವೆ.[೧]
◾ಆಹಾರದ ವಾಸನೆ ಪತ್ತೆಯಾದಾಗ, ಬೇಟೆಯ ದಿಕ್ಕು ತಿಳಿಯಲು ಹಾವು ತನ್ನ ನಾಲಿಗೆಯನ್ನು (ಸೀಳು ನಾಲಿಗೆಯು ಸ್ಟೀರಿಯೊದಂತೆ ಕಾರ್ಯನಿರ್ವಹಿಸುವುದು) ಹೊರ ಚಾಚು ವುದು; ಕಾಳಿಂಗ ಸರ್ಪದ ತೀಕ್ಷ್ಣ ದೃಷ್ಟಿ (ಕಾಳಿಂಗ ಸರ್ಪಗಳು ೧೦೦ ಮೀಟರ್‌ [300 ಅಡಿ] ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚ ಬಲ್ಲವು), ಬುದ್ಧಿಶಕ್ತಿ[೯] ಮತ್ತು ಬೇಟೆ ಪತ್ತೆಗೆ ಭೂಮಿಯ ಕಂಪನದ ಸಂವೇದನತ್ವ ಗ್ರಹಿಸುವ ಶಕ್ತಿ ಹೊಂದಿವೆ.{1/ ವಿಷಕಾರಿದ ನಂತರ, ಕಾಳಿಂಗ ಸರ್ಪವು ತನ್ನ ಬೇಟೆಯನ್ನು ನುಂಗಲು ಪ್ರಾರಂಭಿಸುವುದು. ಆಗ ಹಾವಿನಲ್ಲಿರುವ ಟಾಕ್ಸಿನ್‌ಗಳು(ವಿಷಕಾರಕ) ನುಂಗಿದ ಆಹಾರದ ಜೀರ್ಣ ಕ್ರಿಯೆಯನ್ನು ಪ್ರಾರಂಭಿಸುವುದು.[೧]
◾ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ಸುಸ್ಥಿರ ಜೋಡಣೆಯ ದವಡೆಗಳನ್ನು ಹೊಂದಿಲ್ಲ. ಅದರ ಬದಲಿಗೆ, ದವಡೆ ಮೂಳೆಗಳ ಹೆಚ್ಚು ಬಾಗುವಿಕೆಯಿಂದಾಗಿ ಅಸ್ತಿಬಂಧನಿಗಳಿಂದ ಸಂಪರ್ಕಿಸಲ್ಪಟ್ಟಿದೆ. ಹೀಗಾಗಿ ಕೆಳಗಿನ ದವಡೆಯ ಮೂಳೆಗಳು ಸ್ವತಂತ್ರ ಮತ್ತು ಸುಲಭವಾಗಿ ಚಲಿಸಬಲ್ಲವು.[೧] ಇತರ ಹಾವುಗಳಂತೆ ಕಾಳಿಂಗ ಸರ್ಪವು ತನ್ನ ಆಹಾರವನ್ನು ಜಗಿಯದೆ, ಸಂಪೂರ್ಣವಾಗಿ ನುಂಗುವುದು.
◾ದವಡೆ ಅಗಲಿಸುವಿಕೆಯಿಂದಾಗಿ ತನ್ನ ತಲೆಗಿಂತಲೂ ದೊಡ್ಡದಾಗ ಬೇಟೆಯನ್ನು ಅದು ನುಂಗಿ (ಆಹಾರ)ಅರಗಿಸಿಕೊಳ್ಳಬಹುದಾಗಿದೆ[೧]. ರಾತ್ರಿ ಕಡಿಮೆ ಕಾಣಿಸಿಕೊಂಡರೂ, ಕಾಳಿಂಗ ಸರ್ಪಗಳು ಯಾವುದೇ ಸಮಯದಲ್ಲಿ ಬೇಟೆಯನ್ನಾಡಬಹುದಾಗಿದೆ. ಬಹುತೇಕ ಪ್ರಖ್ಯಾತ ಸರೀಸೃಪ ವಿಜ್ಞಾನಿಗಳು ಇದನ್ನು ದಿವಾಚರ (ಹಗಲಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ) ಜಾತಿಯ ಸರಿಸೃಪಗಳಿಗೆ ಹೋಲಿಸುತ್ತಾರೆ.[೧][೨]

ಆಹಾರ ಕ್ರಮ
◾ಕಾಳಿಂಗ ಸರ್ಪದ ಆಹಾರ ಕ್ರಮವು ಪ್ರಮುಖವಾಗಿ ಇತರ ಹಾವುಗಳನ್ನು ಒಳಗೊಂಡಿದೆ (ಒಫಿಯೊಫಜಿ): ಹೆಬ್ಬಾವುಗಳುನಂತಹ ವಿಷಕಾರಿಯಲ್ಲದ ಹಾವು ಮತ್ತು ತೀಕ್ಷ್ಣ ವಿಷದ ಪಟ್ಟೆ ಹಾವುಗಳನ್ನು ಒಳಗೊಂಡಿರುವ ವಿಷಪೂರಿತ ಹಾವುಗಳು[೨]<refname = "co born"/> ಇದರ ಆಹಾರವಾಗಿದೆ. ಆಹಾರದ ಕೊರತೆಯಾದಾಗ, ಕಾಳಿಂಗ ಸರ್ಪವು ಹಲ್ಲಿಗಳು, ಪಕ್ಷಿಗಳು ಮತ್ತು ಇಲಿ, ಮೊಲದಂತಹ ಚಿಕ್ಕ ಕಶೇರುಕ ಪ್ರಾಣಿಗಳನ್ನು ಸಹ ತಿನ್ನುವುದು.
◾ಕೆಲವು ಸಂದರ್ಭಗಳಲ್ಲಿ ಇದು ಸುಲಭವಾಗಿ ಬಾಗುವ ತನ್ನ ಸ್ನಾಯು ಬಲ ಬಳಸಿ, ಪಕ್ಷಿಗಳು ಮತ್ತು ದೊಡ್ಡ ಗಾತ್ರದ ಕಶೇರುಕಗಳಂತಹವುಗಳ ಗಾತ್ರ “ಕುಗ್ಗಿಸಿ,” ನುಂಗಬಲ್ಲವು. ಆದರೂ ಇದು ಅಪರೂಪವೆನ್ನಬಹುದು.[೧][೧೦] ಕಾಳಿಂಗ ಸರ್ಪದ ನಿಧಾನಗತಿಯ ಚಯಾಪಚಯಿ(ಜೀರ್ಣ) ಕ್ರಿಯೆಯಿಂದಾಗಿ, ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಆಹಾರ ಸೇವಿಸಿದ ನಂತರ, ಹಲವು ತಿಂಗಳವರೆಗೆ ಅದಕ್ಕೆ ಆಹಾರದ ಅಗತ್ಯವಿರು ವುದಿಲ್ಲ.[೧] ಇಲಿ ಹಾವು ಕಾಳಿಂಗ ಸರ್ಪದ ಸಾಮಾನ್ಯ ಆಹಾರವಾಗಿದೆ. ಕಾಳಿಂಗ ಸರ್ಪಗಳು ಇಲಿಗಳ ಆಕರ್ಷಣೆಯಿಂದಾಗಿ ಹುಡುಕಿ ಕೊಂಡು ಮಾನವನ ಆವಾಸ ಸ್ಥಾನಗಳಿಗೆ ಬರುತ್ತವೆ.

ರಕ್ಷಣೆ
◾ಕಾಳಿಂಗ ಸರ್ಪ ಬೆದರಿಸಿದಾಗ, ತನ್ನ ದೇಹದ ಮೂರನೇ ಒಂದು ಭಾಗದಷ್ಟು ಗೋಣನ್ನು ಮೇಲೆತ್ತಿ, ಕುತ್ತಿಗೆ (ವಯಸ್ಕರ ಮೊಣಕೈಯನ್ನು ಸುತ್ತಬಹುದಾದಷ್ಟು) ನೇರಗೊಳಿಸಿ, ವಿಷದ ಹಲ್ಲುಗಳ ತೋರಿಸುವ ಮೂಲಕ ಜೋರಾಗಿ ಬುಸುಗುಟ್ಟುವುದು.
◾ತೀರಾ ಹತ್ತಿರಕ್ಕೆ ಬರುವ ವಸ್ತು ಅಥವಾ ಜೀವಿಗಳ ಅನೀರಿಕ್ಷಿತ ಚಲನೆಯಿಂದಾಗಿ ಅವು ಹಠಾತ್ತನೆ ಕೆರಳುತ್ತವೆ. ಕಾಳಿಂಗ ಸರ್ಪಗಳು ಬಹಳಷ್ಟು ಬಾರಿ ಹಠಾತ್ ದಾಳಿ ನಡೆಸುವುವಲ್ಲ ದೇ ಸುಮಾರು ೭ ಅಡಿಯಷ್ಟು ದೂರದಿಂದಲೇ ಅಪ್ಪಳಿಸಿ ಬಲಿ ಹಿಡಿವ ಸಾಮರ್ಥ್ಯ ಹೊಂದಿವೆ..
◾ನಿರೊಟಾಕ್ಸಿಕ್‌ಗಳಿಗೆ(ನರಗಳ ಮೇಲೆ ವಿಷದಿಂದಾಗುವ) ಪ್ರತಿರೋಧ ಹೊಂದಿರುವ ಮುಂಗುಸಿಯಂತಹ ಸ್ವಾಭಾವಿಕ ಪರಭಕ್ಷಕ ಜೀವಿಗಳನ್ನು ಕಾಳಿಂಗ ಸರ್ಪಹೋರಾಟ ಮಾಡಿ ಎದುರಿಸಿದರೆ,[೧೧]
◾ಸಾಮಾನ್ಯವಾಗಿ ಹಾವುಗಳು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವವು. ಒಂದು ವೇಳೆ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ನಾಗರ ಹಾವಿನ ಮಾದರಿ ಯಲ್ಲಿ ಗಟ್ಟಿಯಾಗಿ ಬುಸುಗುಟ್ಟಿ, ಕೆಲವೊಮ್ಮೆ ಬಾಯಿ ಮುಚ್ಚಿದಂತೆ ನಟಿಸಿ, ಎದುರಿನ ಪ್ರಾಣಿಯ ಮೇಲೆ ಜೋರಾಗಿ ಅಪ್ಪಳಿಸುವುದು. ಆ ಸಂದರ್ಭದಲ್ಲಿ ಕಾಳಿಂಗ ಸರ್ಪದ ಈ ಪ್ರಯತ್ನ ಪರಿಣಾಮಕಾರಿಯಾಗಿ ಫಲಕಾರಿಯಾಗುತ್ತದೆ. ವಿಶೇಷವಾಗಿ ಬೇಟೆ ಯಾಡುವುದರಲ್ಲಿ ಕಾಳಿಂಗ ಸರ್ಪವು ಮುಂಗುಸಿಯಂತಹ ಸಸ್ತನಿಗಳಿಗಿಂತ ಹೆಚ್ಚು ಅಪಾಯಕಾರಿ. ಇದು ಚಿಕ್ಕ ಸಸ್ತನಿಗಳನ್ನು ಸುಲಭವಾಗಿ ಕೊಲ್ಲುವುದು.
ಆವಾಸ ಸ್ಥಾನ
◾ಕಾಳಿಂಗ ಸರ್ಪವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತಿದ್ದವು. ಆದರೆ ಅವುಗಳು ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಇವುಗಳು ಎತ್ತರದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.[೧][೭] ಹೆಚ್ಚಾಗಿ ಸರೋವರ ಮತ್ತು ಹಳ್ಳಗಳು ಆಸುಪಾಸಿನ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ.
◾ಅರಣ್ಯನಾಶದಿಂದಾಗಿ ಕಾಳಿಂಗ ಸರ್ಪದ ಸಂಖ್ಯೆಯು ಕಡಿಮೆಯಾಗುತ್ತಿದೆ. ಆದರೆ ಇದು ಅಳಿವಿನಂಚಿನಲ್ಲಿರುವ ಹಾವುಗಳಂತೆ IUCNನ ಪಟ್ಟಿಯಲ್ಲಿ ದಾಖಲಾಗಿಲ್ಲ. ಇದು ಕೇವಲ ದಾಖಲೆಗಳಲ್ಲಿ ಅನುಬಂಧ II ಪ್ರಾಣಿಗಳ ವರ್ಗದಲ್ಲಿ ದಾಖಲಾಗಿದೆ.[೮]

ಬೇಟೆ
◾ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ತಮ್ಮ ಸೀಳು ನಾಲಿಗೆಗಳ ಮೂಲಕ ರಸಾಯನಿಕ ಸಂಕೇತ (“ವಾಸನೆ”) ಪಡೆಯುವವು. ಶರೀರದ ಸೂಕ್ಷ್ಮ ಭಾಗದಿಂದ ವಾಸನೆ ಗ್ರಹಿಸಿ, ತಮ್ಮ ಬಾಯಿಯ ಮೇಲ್ಗಡೆಯಿರುವ ವಿಶೇಷ ಸಂವೇದನ ಗ್ರಹಣ ಶಕ್ತಿಗೆ ಜಕೋಬ್ಸನ್‌ರ (ಎಂಬ)ಅಂಗ)ದ ಮೂಲಕ ಬೇಟೆಯ ಇರುವಿಕೆಯ ಮಾಹಿತಿಯನ್ನು ವರ್ಗಾಯಿಸುತ್ತವೆ.[೧]
◾ಆಹಾರದ ವಾಸನೆ ಪತ್ತೆಯಾದಾಗ, ಬೇಟೆಯ ದಿಕ್ಕು ತಿಳಿಯಲು ಹಾವು ತನ್ನ ನಾಲಿಗೆಯನ್ನು (ಸೀಳು ನಾಲಿಗೆಯು ಸ್ಟೀರಿಯೊದಂತೆ ಕಾರ್ಯನಿರ್ವಹಿಸುವುದು) ಹೊರ ಚಾಚು ವುದು; ಕಾಳಿಂಗ ಸರ್ಪದ ತೀಕ್ಷ್ಣ ದೃಷ್ಟಿ (ಕಾಳಿಂಗ ಸರ್ಪಗಳು ೧೦೦ ಮೀಟರ್‌ [300 ಅಡಿ] ದೂರದಲ್ಲಿ ಚಲಿಸುತ್ತಿರುವ ತನ್ನ ಬೇಟೆಯನ್ನು ಪತ್ತೆ ಹಚ್ಚ ಬಲ್ಲವು), ಬುದ್ಧಿಶಕ್ತಿ[೯] ಮತ್ತು ಬೇಟೆ ಪತ್ತೆಗೆ ಭೂಮಿಯ ಕಂಪನದ ಸಂವೇದನತ್ವ ಗ್ರಹಿಸುವ ಶಕ್ತಿ ಹೊಂದಿವೆ.{1/ ವಿಷಕಾರಿದ ನಂತರ, ಕಾಳಿಂಗ ಸರ್ಪವು ತನ್ನ ಬೇಟೆಯನ್ನು ನುಂಗಲು ಪ್ರಾರಂಭಿಸುವುದು. ಆಗ ಹಾವಿನಲ್ಲಿರುವ ಟಾಕ್ಸಿನ್‌ಗಳು(ವಿಷಕಾರಕ) ನುಂಗಿದ ಆಹಾರದ ಜೀರ್ಣ ಕ್ರಿಯೆಯನ್ನು ಪ್ರಾರಂಭಿಸುವುದು.[೧]
◾ಇತರ ಹಾವುಗಳಂತೆ ಕಾಳಿಂಗ ಸರ್ಪಗಳು ಸುಸ್ಥಿರ ಜೋಡಣೆಯ ದವಡೆಗಳನ್ನು ಹೊಂದಿಲ್ಲ. ಅದರ ಬದಲಿಗೆ, ದವಡೆ ಮೂಳೆಗಳ ಹೆಚ್ಚು ಬಾಗುವಿಕೆಯಿಂದಾಗಿ ಅಸ್ತಿಬಂಧನಿಗಳಿಂದ ಸಂಪರ್ಕಿಸಲ್ಪಟ್ಟಿದೆ. ಹೀಗಾಗಿ ಕೆಳಗಿನ ದವಡೆಯ ಮೂಳೆಗಳು ಸ್ವತಂತ್ರ ಮತ್ತು ಸುಲಭವಾಗಿ ಚಲಿಸಬಲ್ಲವು.[೧] ಇತರ ಹಾವುಗಳಂತೆ ಕಾಳಿಂಗ ಸರ್ಪವು ತನ್ನ ಆಹಾರವನ್ನು ಜಗಿಯದೆ, ಸಂಪೂರ್ಣವಾಗಿ ನುಂಗುವುದು.
◾ದವಡೆ ಅಗಲಿಸುವಿಕೆಯಿಂದಾಗಿ ತನ್ನ ತಲೆಗಿಂತಲೂ ದೊಡ್ಡದಾಗ ಬೇಟೆಯನ್ನು ಅದು ನುಂಗಿ (ಆಹಾರ)ಅರಗಿಸಿಕೊಳ್ಳಬಹುದಾಗಿದೆ[೧]. ರಾತ್ರಿ ಕಡಿಮೆ ಕಾಣಿಸಿಕೊಂಡರೂ, ಕಾಳಿಂಗ ಸರ್ಪಗಳು ಯಾವುದೇ ಸಮಯದಲ್ಲಿ ಬೇಟೆಯನ್ನಾಡಬಹುದಾಗಿದೆ. ಬಹುತೇಕ ಪ್ರಖ್ಯಾತ ಸರೀಸೃಪ ವಿಜ್ಞಾನಿಗಳು ಇದನ್ನು ದಿವಾಚರ (ಹಗಲಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವ) ಜಾತಿಯ ಸರಿಸೃಪಗಳಿಗೆ ಹೋಲಿಸುತ್ತಾರೆ.[೧][೨]

ಆಹಾರ ಕ್ರಮ
◾ಕಾಳಿಂಗ ಸರ್ಪದ ಆಹಾರ ಕ್ರಮವು ಪ್ರಮುಖವಾಗಿ ಇತರ ಹಾವುಗಳನ್ನು ಒಳಗೊಂಡಿದೆ (ಒಫಿಯೊಫಜಿ): ಹೆಬ್ಬಾವುಗಳುನಂತಹ ವಿಷಕಾರಿಯಲ್ಲದ ಹಾವು ಮತ್ತು ತೀಕ್ಷ್ಣ ವಿಷದ ಪಟ್ಟೆ ಹಾವುಗಳನ್ನು ಒಳಗೊಂಡಿರುವ ವಿಷಪೂರಿತ ಹಾವುಗಳು[೨]<refname = "co born"/> ಇದರ ಆಹಾರವಾಗಿದೆ. ಆಹಾರದ ಕೊರತೆಯಾದಾಗ, ಕಾಳಿಂಗ ಸರ್ಪವು ಹಲ್ಲಿಗಳು, ಪಕ್ಷಿಗಳು ಮತ್ತು ಇಲಿ, ಮೊಲದಂತಹ ಚಿಕ್ಕ ಕಶೇರುಕ ಪ್ರಾಣಿಗಳನ್ನು ಸಹ ತಿನ್ನುವುದು.
◾ಕೆಲವು ಸಂದರ್ಭಗಳಲ್ಲಿ ಇದು ಸುಲಭವಾಗಿ ಬಾಗುವ ತನ್ನ ಸ್ನಾಯು ಬಲ ಬಳಸಿ, ಪಕ್ಷಿಗಳು ಮತ್ತು ದೊಡ್ಡ ಗಾತ್ರದ ಕಶೇರುಕಗಳಂತಹವುಗಳ ಗಾತ್ರ “ಕುಗ್ಗಿಸಿ,” ನುಂಗಬಲ್ಲವು. ಆದರೂ ಇದು ಅಪರೂಪವೆನ್ನಬಹುದು.[೧][೧೦] ಕಾಳಿಂಗ ಸರ್ಪದ ನಿಧಾನಗತಿಯ ಚಯಾಪಚಯಿ(ಜೀರ್ಣ) ಕ್ರಿಯೆಯಿಂದಾಗಿ, ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಆಹಾರ ಸೇವಿಸಿದ ನಂತರ, ಹಲವು ತಿಂಗಳವರೆಗೆ ಅದಕ್ಕೆ ಆಹಾರದ ಅಗತ್ಯವಿರು ವುದಿಲ್ಲ.[೧] ಇಲಿ ಹಾವು ಕಾಳಿಂಗ ಸರ್ಪದ ಸಾಮಾನ್ಯ ಆಹಾರವಾಗಿದೆ. ಕಾಳಿಂಗ ಸರ್ಪಗಳು ಇಲಿಗಳ ಆಕರ್ಷಣೆಯಿಂದಾಗಿ ಹುಡುಕಿ ಕೊಂಡು ಮಾನವನ ಆವಾಸ ಸ್ಥಾನಗಳಿಗೆ ಬರುತ್ತವೆ.

ರಕ್ಷಣೆ
◾ಕಾಳಿಂಗ ಸರ್ಪ ಬೆದರಿಸಿದಾಗ, ತನ್ನ ದೇಹದ ಮೂರನೇ ಒಂದು ಭಾಗದಷ್ಟು ಗೋಣನ್ನು ಮೇಲೆತ್ತಿ, ಕುತ್ತಿಗೆ (ವಯಸ್ಕರ ಮೊಣಕೈಯನ್ನು ಸುತ್ತಬಹುದಾದಷ್ಟು) ನೇರಗೊಳಿಸಿ, ವಿಷದ ಹಲ್ಲುಗಳ ತೋರಿಸುವ ಮೂಲಕ ಜೋರಾಗಿ ಬುಸುಗುಟ್ಟುವುದು.
◾ತೀರಾ ಹತ್ತಿರಕ್ಕೆ ಬರುವ ವಸ್ತು ಅಥವಾ ಜೀವಿಗಳ ಅನೀರಿಕ್ಷಿತ ಚಲನೆಯಿಂದಾಗಿ ಅವು ಹಠಾತ್ತನೆ ಕೆರಳುತ್ತವೆ. ಕಾಳಿಂಗ ಸರ್ಪಗಳು ಬಹಳಷ್ಟು ಬಾರಿ ಹಠಾತ್ ದಾಳಿ ನಡೆಸುವುವಲ್ಲ ದೇ ಸುಮಾರು ೭ ಅಡಿಯಷ್ಟು ದೂರದಿಂದಲೇ ಅಪ್ಪಳಿಸಿ ಬಲಿ ಹಿಡಿವ ಸಾಮರ್ಥ್ಯ ಹೊಂದಿವೆ..
◾ನಿರೊಟಾಕ್ಸಿಕ್‌ಗಳಿಗೆ(ನರಗಳ ಮೇಲೆ ವಿಷದಿಂದಾಗುವ) ಪ್ರತಿರೋಧ ಹೊಂದಿರುವ ಮುಂಗುಸಿಯಂತಹ ಸ್ವಾಭಾವಿಕ ಪರಭಕ್ಷಕ ಜೀವಿಗಳನ್ನು ಕಾಳಿಂಗ ಸರ್ಪಹೋರಾಟ ಮಾಡಿ ಎದುರಿಸಿದರೆ,[೧೧]
◾ಸಾಮಾನ್ಯವಾಗಿ ಹಾವುಗಳು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವವು. ಒಂದು ವೇಳೆ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ನಾಗರ ಹಾವಿನ ಮಾದರಿ ಯಲ್ಲಿ ಗಟ್ಟಿಯಾಗಿ ಬುಸುಗುಟ್ಟಿ, ಕೆಲವೊಮ್ಮೆ ಬಾಯಿ ಮುಚ್ಚಿದಂತೆ ನಟಿಸಿ, ಎದುರಿನ ಪ್ರಾಣಿಯ ಮೇಲೆ ಜೋರಾಗಿ ಅಪ್ಪಳಿಸುವುದು. ಆ ಸಂದರ್ಭದಲ್ಲಿ ಕಾಳಿಂಗ ಸರ್ಪದ ಈ ಪ್ರಯತ್ನ ಪರಿಣಾಮಕಾರಿಯಾಗಿ ಫಲಕಾರಿಯಾಗುತ್ತದೆ. ವಿಶೇಷವಾಗಿ ಬೇಟೆ ಯಾಡುವುದರಲ್ಲಿ ಕಾಳಿಂಗ ಸರ್ಪವು ಮುಂಗುಸಿಯಂತಹ ಸಸ್ತನಿಗಳಿಗಿಂತ ಹೆಚ್ಚು ಅಪಾಯಕಾರಿ. ಇದು ಚಿಕ್ಕ ಸಸ್ತನಿಗಳನ್ನು ಸುಲಭವಾಗಿ ಕೊಲ್ಲುವುದು.
ಹಾವಿನ ಉಪಯೊಗಗಳು
◾ಹಾವಿನ ಉಪಯೊಗಗಳು೧೨೧೨೧೨೧೨೧೨೧೧೧೧೧೨೩೨ ಟಿನ್‌ಗಳು ಮತ್ತು ಪಾಲಿಪೆಪ್ಟೈಡ್‌(ಅಮೀನೊ ಆಮ್ಲ)ಗಳನ್ನು ಒಳಗೊಂಡಿರುವ ಕಾಳಿಂಗ ಸರ್ಪದ ವಿಷವು ಹಾವಿನ ಕಣ್ಣಿನ (ಇತರ ಹಾವುಗಳಲ್ಲಿರುವಂತೆ) ಹಿಂಭಾಗದಲ್ಲಿರುವ ವಿಶೇಷ ಲಾಲಾರಸ ಗ್ರಂಥಿಗಳ ಮೂಲಕ ಉತ್ಪತ್ತಿಯಾಗುವುದು. ಬೇಟೆಯಾಡುವ ಪ್ರಾಣಿಯನ್ನು ಕಚ್ಚಿದಾಗ, ವಿಷವು ಹಾವಿನ ಅರ್ಧ ಅಂಗುಲದ (೧.೨೫ ಸೆ.ಮೀ) ವಿಷದ ಹಲ್ಲುಗಳ ಮೂಲಕ ಗಾಯದೊಳಗೆ ನುಸುಳುವುದು.
◾ಈ ಹಿಂದಿನ ಸಂಶೋಧನೆಯಂತೆ ಕಾಳಿಂಗ ಸರ್ಪದ ವಿಷವು LD/೫೦ ಅಳತೆಯಂತೆ ೧.೭ mg/kg ನಷ್ಟು ಎಂದು ಪರಿಗಣಿಸಲಾಗುತ್ತಿತ್ತು (ಅತಿ ಕಡಿಮೆ ವಿಷಕಾರಿ ಹಾವುಗಳಲ್ಲಿ ಒಂದು ಎಂದು). ಆದರೂ, ಇದು ಯಾವಾಗಲೂ ಸತ್ಯಸಂಗತಿಯಾಗಿರುವದಿಲ್ಲ. ಇತ್ತೀಚಿನ ಟಾಕ್ಸಿನಾಲಜಿ(ಹಾವಿನ ವಿಷದ ಅಧ್ಯಯನ) ಪ್ರಕಾರ, ಚೀನಾದ ಕಾಳಿಂಗ ಸರ್ಪದ LD/೫೦ರಷ್ಟು ಪ್ರಮಾಣಕ್ಕೆ ಹೋಲಿಸಿದರೆ ಇದರ ವಿಷವು ೦.೩೪ mg/kg-೦.೪೬ mg/kgಯಷ್ಟಿರುವುದು.
◾ಅಂದರೆ ಇದು ಚೀನಾದ ನಾಗರಹಾವುಗಳಂತಹ [೫] ಇತರ ಜಾತಿಯಲ್ಲಿರುವ ನಾಗರಹಾವುಗಳ ವಿಷಕ್ಕಿಂತ ಹೆಚ್ಚು ಪ್ರಮಾಣದ್ದಾಗಿದೆ ಎಂದು ತಿಳಿದುಬಂದಿದೆ. ಆದರೂ ಸಹ ಕಾಳಿಂಗ ಸರ್ಪದ ವಿಷದ ಪ್ರಮಾಣವು ಇತರ ಕೆಲವು ವಿಷಕಾರಿ ಹಾವುಗಳಿಗಿಂತ (ಟೈಪ್ಯಾನ್‌,(ಆಸ್ಟ್ರೇಲಿಯಾದಲ್ಲಿನ ದೊಡ್ಡ ವಿಷದ ಹಾವು) ಬಣ್ಣ,ಬಣ್ಣದ ಪಟ್ಟೆಹಾವು,ಗಿಂತ ಇತ್ಯಾದಿಗಳಂತಹ) ದುರ್ಬಲವಾಗಿದೆ. ಕಾಳಿಂಗ ಸರ್ಪಗಳು ಇತರ ಜಾತಿಯ ಹಾವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಷ ಹೊರಸೂಸುತ್ತವೆ.
◾ಕಾಳಿಂಗ ಸರ್ಪವು ಒಂದು ಬಾರಿಗೆ ೩೮೦-೬೦೦ mgಯಷ್ಟು ವಿಷವನ್ನು (ಇದು ೨೦-೪೦ ವಯಸ್ಕ ಮನುಷ್ಯರನ್ನು ಕೊಲ್ಲಲು ಸಾಕಾಗುವುದು) ಶರೀರದೊಳಗೆ ಸೇರಿಸುವ ಶಕ್ತಿ ಹೊಂದಿವೆ. ಇಷ್ಟೊಂದು ಪ್ರಮಾಣದ ವಿಷವು ಆನೆಯನ್ನು ೩ ಗಂಟೆಗಳೊಳಗೆ ಕೊಲ್ಲಲು ಸಾಕಾಗುವದೆಂದು ಹೇಳಲಾಗುತ್ತದೆ. ಒಂದು ಬಾರಿ ಕಾಳಿಂಗ ಸರ್ಪ ಕಚ್ಚಿದಲ್ಲಿ, ಅದರ ವಿಷದ ಭೀಕರ ಪ್ರಮಾಣದಿಂದಾಗಿ ಮನುಷ್ಯ ೧೫ ನಿಮಿಷಗಳೊಳಗೆ ಸಾವನ್ನಪ್ಪುವನು.
◾ಆದರೂ, ಬಹುತೇಕ ಸಂದರ್ಭದಲ್ಲಿ ೩೦–೪೫ ನಿಮಿಷಗಳ ತನಕ ಬದುಕಿರುವ ಸಾಧ್ಯತೆ ಇರುತ್ತದೆ.[೫][೧೨][೧೩] ಕಾಳಿಂಗ ಸರ್ಪದ ವಿಷ ಮೂಲತಃ ನರಮಂಡಲದ ಮೇಲಿನ ಭೀಕರ ಪ್ರಭಾವದ್ದಾಗಿದೆ. ಇದು ನಿರೊಕಾಕ್ಸಿಕ್‌ ಆಗಿ ಬಲಿ ಪ್ರಾಣಿಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಹಾಗಾಗಿ ಕಚ್ಚಿಸಿಕೊಂಡ ಪ್ರಾಣಿಯ ಕೇಂದ್ರ ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರಿ ತೀವ್ರಗತಿಯ ನೋವು, ದೃಷ್ಟಿ ಮಂದ, ತಲೆತಿರುಗುವಿಕೆ, ಜಡತ್ವ ಮತ್ತು ಪಾರ್ಶ್ವ ವಾಯು ಗೆ ತುತ್ತಾಗುವ ಸಂಭವವಿದೆ.
◾[೧೨] ಈ ವಿಷವು ಹೃದಯ ರಕ್ತನಾಳವನ್ನು ಹಾಳುಮಾಡುವದರಿಂದ, ಕಡಿತಕೊಳಗಾದ ಪ್ರಾಣಿಯು ವಿಸ್ಮೃತಿ ಯ ಸ್ಥಿತಿ ತಲುಪುವುದು. ಹೀಗಾಗಿ ಅನೀರಿಕ್ಷಿತ ಉಸಿರಾಟದ ವೈಫಲ್ಯದಿಂದಾಗಿ ಸಾವು ಸಂಭವಿಸುವುದು. ಕಾಳಿಂಗ ಸರ್ಪ ಕಡಿತದ ಚಿಕಿತ್ಸೆಗಾಗಿ, ವಿಶೇಷವಾಗಿ ತಯಾರಿಸಿದ ಎರಡು ವಿಧದ ವಿಷ ನಿರೋಧಕಗಳು ಸದ್ಯ ಲಭ್ಯವಿವೆ. ಒಂದನ್ನು ಥೈಲ್ಯಾಂಡ್‌ ರೆಡ್‌ ಕ್ರಾಸ್‌ ಸಂಸ್ಥೆಯು ಸಿದ್ದಪಡಿಸಿದರೆ, ಇನ್ನೊಂದನ್ನು ಭಾರತದ ಸೆಂಟ್ರಲ್‌ ರಿಸರ್ಚ್‌ ಇನ್‌ಸ್ಟಿಟ್ಯುಟ್‌ ತಯಾರಿಸುವುದು;
◾ಆದರೂ ಇವುಗಳೆರಡು ಚಿಕ್ಕ ಪ್ರಮಾಣದಲ್ಲಿ ಉತ್ಪದನೆಯಾಗುವದರಿಂದ ಲಭ್ಯತೆ ಕೂಡಾ ತುಂಬಾ ಕಡಿಮೆ.[೧೪] ವಿಷದಲ್ಲಿರುವ ಒಹಾನಿನ್‌ ಎಂಬ ಪ್ರೋಟಿನ್‌ ಅಂಶವು ಸಸ್ತನಿಗಳಲ್ಲಿ ಹೈಪೊಲೊಮೊಷನ್‌ (ಅಸಹನೀಯ ನೋವು)(hypolocomotion) ಮತ್ತು ಹೈಪರಾಲ್ಜೆಸಿಯಾಕ್ಕೆ(ಅತಿಯಾದ ರಕ್ತದ ಹರಿವು) (hyperalgesia) ಕಾರಣವಾಗುತ್ತದೆ.[೧೫] ವಿಷದ ಇತರ ಅಂಶಗಳು ಕಾರ್ಡಿಯೊಟಾಕ್ಸಿಕ್‌,[೧೬] ಸಿಟೊಟಾಕ್ಸಿಕ್‌ ಮತ್ತು ನಿರೊಕಾಕ್ಸಿಕ್‌ ಪ್ರಭಾವ ಬೀರುವ ಅಂಶಗಳನ್ನು ಹೊಂದಿವೆ.[೧೭]
◾ಕಾಳಿಂಗ ಸರ್ಪ ಭಯಾನಕ ಮತ್ತು ಅಪಾಯಕಾರಿಯಾಗಿ ಹಾವಾಗಿದ್ದರೂ, ಇದು ನಾಚಿಕೆ ಸ್ವಭಾವ ಮತ್ತು ಏಕಾಂಗಿತನ ಬಯಸುವ ಪ್ರಾಣಿಯಾಗಿದೆ. ಮನುಷ್ಯರೊಂದಿಗೆ ಮುಖಾಮುಖಿಯಾಗುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಯತ್ನಿಸುವುದು.[೧೦] ಮೊನೊಕಾಲ್ಡ್‌ ನಾಗರಹಾವು ಅಥವಾ ರುಸೆಲ್ಸ್‌ ವೈಪರ್‌ (ಘೋರ ವಿಷದ ಮಂಡಲ) ಹಾವಿನಂತಹ ಇತರ ಹಾವುಗಳು ಕಾಳಿಂಗ ಸರ್ಪಕ್ಕಿಂತ ಹೆಚ್ಚು ಮಾರಕವಾಗಿವೆ. [೭]
ನಾಗರಹಾವು





ವೈಜ್ಞಾನಿಕ ವರ್ಗೀಕರಣ
Kingdom: Animalia
Phylum: Chordata
Class: Reptilia
Order: Squamata
Suborder: Serpentes
Family: Elapidae
Genus: Naja
Species: N. atra



ನಾಗರಹಾವು - ಎಲಪಿದೇ ವರ್ಗಕ್ಕೆ ಸೇರುವ ವಿಷಪೂರಿತ ಹಾವು.
ಪ್ರಭೇದ: ನಜ ನಜ
ವಾಸಸ್ಥಾನ: ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕ
ಸ್ವಭಾವ: ವಿಷಕಾರಿ. ಇದರ ವಿಷ ಶಕ್ತಿಶಾಲಿ ನ್ಯೂರೋಟಾಕ್ಸಿನ್‍ಗಳನ್ನೊಳಗೊಂಡಿದೆ. ಈ ವಿಷ ಸ್ನಾಯು ಮತ್ತು ಉಸಿರು ಅಥವಾ ಹೃದಯಾಘಾತದ ಮೇಲೆ ಹೆಚ್ಚು ಪರಿಣಾಮವುಂಟುಮಾಡುತ್ತದೆ.
ಆಹಾರ: ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳು ಇತ್ಯಾದಿ


ತೋರಿಕೆ ಮತ್ತು ವಿವರ
ನಾಗರಹಾವಿನ ಪ್ರಮಖವಾಗಿ ಗುರುತಿಸಬಹುದಾದ ಲಕ್ಷಣ ಅದರ ಹೆಡೆ. ಬಹಳ ವಿಷಪೂರಿತ ಹಾವುಗಳಲ್ಲೂ ಸಹ ಒಂದು

ಹಿಂದೂ ಧರ್ಮ
ಹಿಂದೂ ಧರ್ಮದಲ್ಲಿ ನಾಗರಹಾವನ್ನು ದೇವತೆಯೆಂದು(ನಾಗದೇವತೆ, ನಾಗಪ್ಪ) ಪರಿಗಣಿಸಲಾಗುತ್ತದೆ.
ಮಂಡಲ ಹಾವು




ವೈಜ್ಞಾನಿಕ ವರ್ಗೀಕರಣ
Kingdom: Animalia
Phylum: Chordata
Subphylum: Vertebrata
Class: Reptilia
Order: Squamata
Suborder: Serpentes
Family: Viperidae
Subfamily: Viperinae
Genus: Daboia
Gray, 1842
Species: D. russelii
ಇಂಗ್ಲೀಷಿನಲ್ಲಿ ಈ ಹಾವಿಗೆ Russell's Viper ಎನ್ನುತ್ತಾರೆ.
ಪ್ರಭೇದ: ಡಬೊಯ ರಸಲೀ (Daboia Russelii)
ವಾಸಸ್ಥಾನ: ದಕ್ಷಿಣ ಏಷ್ಯ
ಸ್ವಭಾವ: ಭಾರಿ ವಿಷಕಾರಿ ಸರ್ಪ. ೫.೫ ಅಡಿಗಳಷ್ಟು ಉದ್ದ ಬೆಳೆಯುತ್ತದೆ. ಈ ಹಾವಿನಲ್ಲಿ ಸುಮರು ೧೩೦-೨೫೦ ಮಿ.ಗ್ರಾಂನಷ್ಟು ವಿಷ ಉತ್ಪತ್ತಿಯಾಗುತ್ತದೆ.
ಆಹಾರ: ಇಲಿ, ಹೆಗ್ಗಣ, ಹಲ್ಲಿ, ಪಕ್ಷಿ ಮರಿಗಳು
ಪುಸ್ತಕಗಳಿಂದ : ಕರಾವಿಪ ಪ್ರಕಟಣೆ : ಲೇಖಕರು : ಡಾ. ಎಚ್.ಎಸ್. ನಿರಂಜನ ಆರಾಧ್ಯ : ಜೀವಲೋಕದ ವಿಸ್ಮಯಕಾರಿ ಪ್ರಾಣಿಗಳು ಹಾವುಗಳು :ವಿಷವಿಲ್ಲದ ಹಾವುಗಳಾವುವು ?

ನಮ್ಮ ದೇಶದಲ್ಲಿ ೧೬೦ ಕ್ಕಿಂತಲೂ ಹೆಚ್ಚು ಪ್ರಭೇದದ ವಿಷವಿಲ್ಲದ ಹಾವುಗಳಿವೆ. ಇವು ವಾಸ ಮಾಡುವ ಸ್ಥಳದ ಆಧಾರದ ಮೇಲೆ ಮಣ್ಣು ಕೊರೆಯುವ ಹಾವುಗಳು, ನೆಲದ ಹಾವುಗಳು, ನೀರು ಹಾವುಗಳು ಮತ್ತು ಮರದ ಹಾವುಗಳೆಂದು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬಹುದು. ಇವು ಮನುಷ್ಯನಿಗೆ ಕಚ್ಚಿದರೆ ಅಪಾಯವೇನೂ ಇಲ್ಲ.
ಮಣ್ಣು ಕೊರೆಯುವ ಹಾವುಗಳು
ಇವು ತಮ್ಮ ತಲೆಯಿಂದ ಮಣ್ಣನ್ನು ಕೊರೆದು ಬಿಲಗಳನ್ನು ಮಾಡಿಕೊಂಡು ಜೀವಿಸುತ್ತವೆ. ಇವುಗಳ ತಲೆಬುರುಡೆ ಗಟ್ಟಿಯಾಗಿರುವುದರಿಂದ ಮತ್ತು ಕುತ್ತಿಗೆಯ ಮಾಂಸಖಂಡಗಳು ಬಲಯುತವಾಗಿರುವುದರಿಂದ ತೆಳುವಾದ ಮಣ್ಣನ್ನು ಬುಲ್ಡೋಜರ್‌ನಂತೆ ನೂಕಿ ಇವು ಒಳನುಗ್ಗುತ್ತವೆ. ಮಣ್ಣಿನೊಳಗೆ ವಾಸಿಸುವುದರಿಂದ ಇವುಗಳ ಶರೀರ ತಂಪಾಗಿರುತ್ತದೆ.  ಈ ಹಾವುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸುತ್ತಾರೆ.


ಮಣ್ಣು ಹಾವುಗಳು 
ಮಣ್ಣಿನೊಳಗೆ ವಾಸಿಸಲು ಹೊಂದಾಣಿಕೆ ಪಡೆದಿರುವ ಈ ಹಾವುಗಳು ತೋಟದ ಮಣ್ಣಿನಲ್ಲಿ, ಮರದ ದಿಮ್ಮಿಗಳ ತೊಗಟೆಯಲ್ಲಿ, ಕೊಳೆಯುತ್ತಿರುವ ಎಲೆಗಳ ಕೆಳಗೆ ಮತ್ತು ಹುತ್ತದ ಮಣ್ಣಿನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ೧೪ ಪ್ರಭೇದಗಳಿವೆ. ಇವು ಭಾರತದ ಅತಿ ಚಿಕ್ಕ ಹಾವುಗಳು. ಸುಮಾರು ೧೨.೫ ಸೆಂ.ಮೀ. ಉದ್ದದ ತೆಳ್ಳನೆಯ ಶರೀರ ಹೊಂದಿರುವ ಇವು ಎರೆಹುಳುಗಳಂತೆಯೇ ಕಾಣುತ್ತವೆ. ಆದರೆ ಇವಕ್ಕೆ ಕಂದು ಬಣ್ಣವಿರುತ್ತದೆ ಮತ್ತು ಶರೀರದ ತುಂಬ ಹುರುಪೆಗಳಿರುತ್ತವೆ. ತೆಳ್ಳನೆಯ ಶರೀರ, ನುಣುಪಾದ ಹೊಳೆಯುವ ಹುರುಪೆಗಳು, ಮೊಂಡಾದ ತಲೆ ಮತ್ತು ಬಾಲ, ಕಂದು ಅಥವಾ ಕಪ್ಪು ಬಣ್ಣದ ಶರೀರ ಮತ್ತು ಸಣ್ಣ ಚುಕ್ಕೆಗಳಂತಹ ಎರಡು ಕಣ್ಣುಗಳು – ಇವು ಮಣ್ಣು ಹಾವುಗಳ ಮುಖ್ಯ ಲಕ್ಷಣಗಳು. ಬಾಲದ ತುದಿಯಲ್ಲಿ ಸಣ್ಣ ಮೊಳೆಯಂತಹ ಹುರುಪೆಯಿರುತ್ತದೆ. ಇವು ಗೆದ್ದಲು, ಇರುವೆಗಳ ಮೊಟ್ಟೆ, ಮರಿ ಮತ್ತು ಎರೆಹುಳುಗಳನ್ನು ತಿನ್ನುತ್ತವೆ. ಇವನ್ನು ಕೈಯಲ್ಲಿ ಹಿಡಿದಾಗ, ಇತರ ಮಣ್ಣು ಕೊರೆಯುವ ಹಾವುಗಳಂತೆ ಬಾಲದಿಂದ ಚುಚ್ಚುತ್ತವೆ. ಇವುಗಳಲ್ಲಿ ಗಂಡು ಹಾವಿಲ್ಲ. ಹೆಣ್ಣು ಹಾವು ಅನಿಶೇಕ ವಿಧಾನದಿಂದ ೫ ರಿಂದ ೮ ಮೊಟ್ಟೆಗಳನ್ನಿಡುತ್ತದೆ.  ಕೆಲವು ಕಡೆ ಇವನ್ನು ಕುರುಡು ಹಾವುಗಳೆನ್ನುತ್ತಾರೆ.


ಕವಚ ಬಾಲದ ಹಾವುಗಳು
ದಕ್ಷಿಣ ಭಾರತದ ಪರ್ವತಗಳ ಮಣ್ಣಿನಲ್ಲಿ ವಿಶೇಷವಾಗಿ ಕಂಡುಬರುವ ಈ ಹಾವುಗಳ ಎರಡೂ ತುದಿಗಳು ಮೊಂಡಾಗಿರುತ್ತವೆ. ಸುಮಾರು ಹೆಬ್ಬೆರಳಿನಷ್ಟು ದಪ್ಪದ ಶರೀರದ ಮೇಲ್ಭಾಗದಲ್ಲಿ ಮಾಸಲು ಬಣ್ಣ ಮತ್ತು ತಳಭಾಗದಲ್ಲಿ ಹಳದಿ ಮಿಶ್ರಿತ ಕಂದು ಬಣ್ಣಗಳು, ಕೆಂಪು ಚುಕ್ಕೆಗಳು ಇವೆ. ಹುರುಪೆಗಳು ನುಣುಪಾಗಿದ್ದು ಹೊಳೆಯುತ್ತಿರುತ್ತವೆ ಮತ್ತು ಮಣ್ಣು ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಈ ಗುಂಪಿಗೆ ಸೇರಿದ ೪೦ ಕ್ಕಿಂತಲೂ ಹೆಚ್ಚು ಪ್ರಭೇದಗಳು ಭಾರತದಲ್ಲಿವೆ.  ಇವು ೩ ರಿಂದ ೫ ಮರಿ ಹಾಕುತ್ತವೆ. ಇವು ಕೀಟ, ಎರೆಹುಳು ಮತ್ತು ಡಿಂಬಗಳನ್ನು ತಿನ್ನುತ್ತವೆ.
ಪ್ರತಿಯೊಂದು ಬೆಟ್ಟದ ಸಾಲಿನಲ್ಲಿಯೂ ವಿಶಿಷ್ಟ ಹೊಂದಾಣಿಕೆ ಪಡೆದ ಒಂದು ಪ್ರಭೇದದ ಕವಚ ಬಾಲದ ಹಾವು ಕಂಡು ಬರುವುದು. ಇದು ಅತ್ಯಂತ ಕುತೂಹಲಕಾರಿ ವಿಷಯ. ಇತ್ತೀಚೆಗೆ ಅರಣ್ಯಗಳು ನಾಶವಾಗುತ್ತಿರುವುದರಿಂದ, ಅರಣ್ಯಗಳಲ್ಲಿ ವಾಸಿಸುವ ಈ ಹಾವುಗಳೂ ನಾಶವಾಗುತ್ತಿವೆ.


ಮಣ್ಣುಮುಕ್ಕ ಹಾವುಗಳು
ಇವು ಹೆಬ್ಬಾವುಗಳ ಸಂಬಂಧಿಗಳು. ಇವು ತಮ್ಮ ಶರೀರದಿಂದ ಬೇಟೆಯನ್ನು ಸುತ್ತಿ ಹಿಸುಕಿ ಸಾಯಿಸುತ್ತವೆ. ಭಾರತದಲ್ಲಿ ಇವುಗಳ ಎರಡು ಪ್ರಭೇದಗಳಿವೆ.
ಸಾಮಾನ್ಯ ಮಣ್ಣು ಮುಕ್ಕ ಅಥವಾ ನೇತ್ರ ಗಾಡ್ಚಿ ಹಾವು ಹೆಚ್ಚಾಗಿ ಬಯಲು ಮತ್ತು ಗುಡ್ಡಗಳ ಪ್ರದೇಶಗಳಲ್ಲಿರುತ್ತದೆ. ಸುಮಾರು ೫೦ ಸೆಂ.ಮೀ. ಉದ್ದ, ಅಗಲವಾದ ಶರೀರ, ಚಿಕ್ಕದಾದ ಒರಟು ಬಾಲ, ತಿಳಿ ಹಳದಿ ಬಣ್ಣದ ಶರೀರದ ಮೇಲೆ ಇಟ್ಟಿಗೆ ಅಥವಾ ಕಪ್ಪು ಬಣ್ಣದ ಮಚ್ಚೆಗಳ ಸಾಲು – ಇವು ಈ ಹಾವಿನ ಮುಖ್ಯ ಲಕ್ಷಣಗಳು. ಹೆಬ್ಬಾವಿನ ಮರಿಯಂತೆ ಇರುವ ಈ ಹಾವನ್ನು ಒಮ್ಮೊಮ್ಮೆ ಕೊಳಕು ಮಂಡಲದ ಹಾವೆಂದು ತಪ್ಪು ತಿಳಿಯುವ ಸಾಧ್ಯತೆಯಿದೆ. ಆದರೆ ಕೊಳಕು ಮಂಡಲದಲ್ಲಿ ಮಚ್ಚೆಗಳು ವಜ್ರಾಕಾರದಲ್ಲಿರುತ್ತವೆ ಮತ್ತು ಕ್ರಮವಾಗಿ ಮೂರು ಸಾಲುಗಳಿರುತ್ತವೆ. ಇದು ಮರಳು ಮಣ್ಣು, ಇಲಿಯ ಬಿಲಗಳು, ಇಟ್ಟಿಗೆ ಗೂಡುಗಳು ಮತ್ತು ಕಲ್ಲುಗುಡ್ಡೆಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಇದನ್ನು ಕಾಮನ್ ಸ್ಯಾಂಡ್‌ಬೋವ – ಸಾಮಾನ್ಯ ಮರಳ ಹೆಬ್ಬಾವು ಎಂದೂ ಕರೆಯುವರು. ನಿಶಾಚರಿಯಾದ ಈ ಹಾವು ಸಂಜೆ ಹೊತ್ತು ಬಿಲದಿಂದ ತಲೆ ಮತ್ತು ಕತ್ತನ್ನು ಹೊರ ಚಾಚಿ ಇಲಿ, ಕಪ್ಪೆ, ಹಲ್ಲಿ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತದೆ.  ಇದನ್ನು ಕೈಯಿಂದ ಹಿಡಿದಾಗ ಕೈಗೆ ಸುತ್ತಿಕೊಂಡು ಬಿರುಸಾಗಿ ಕಚ್ಚುವುದು. ಆದರೆ ಇದು ವಿಷದ ಹಾವಲ್ಲ. ಈ ಹಾವನ್ನು ಹೆದರಿಸಿದಾಗ ಶರೀರದ ಕೆಳಗೆ ತಲೆ ಹುದುಗಿಸಿಕೊಂಡು ರಕ್ಷಣೆ ಪಡೆಯುತ್ತದೆ. ಹೆಣ್ಣು ಮಣ್ಣುಮುಕ್ಕ ಹಾವು ೬ ರಿಂದ ೮ ಮರಿ ಹಾಕುತ್ತದೆ. ಈ ಹಾವನ್ನು ಕೆಲವು ಕಡೆ ಉಸಿರು ಮಂಡಲವೆಂದು ಕರೆಯುತ್ತಾರೆ. ಅನೇಕ ವೇಳೆ ಹಾವಾಡಿಗರು ಈ ಹಾವಿನ ಕಡಿತದಿಂದ ಕುಷ್ಠರೋಗ ಬರುತ್ತದೆಂದೂ ಮತ್ತು ಇದರ ಉಸಿರು ತಾಕಿದರೆ ಚರ್ಮರೋಗ ಬರುತ್ತದೆಂದೂ ಸುಳ್ಳು ಹೇಳುತ್ತಾರೆ.
ಕೆಂಪು ಮಣ್ಣು ಮುಕ್ಕ ಅಥವಾ ಎರಡು ತಲೆ ಹಾವು, ಒಂದೇ ಆಕಾರ ಮತ್ತು ಗಾತ್ರದ ತಲೆ ಮತ್ತು ಬಾಲ ಹೊಂದಿರುತ್ತದೆ.  ಆದ್ದರಿಂದಲೇ ಇದನ್ನು ಎರಡು ತಲೆ ಹಾವೆಂದು ಕರೆಯುತ್ತಾರೆ.  ಸುಮಾರು ೧ ಮೀಟರ್ ಉದ್ದದ ಶರೀರ, ಮೊಂಡು ತಲೆ ಮತ್ತು ಬಾಲ, ಶರೀರದ ತುಂಬ ಸಣ್ಣನೆಯ ಹುರುಪೆಗಳು – ಇವು ಈ ಹಾವಿನ ಮುಖ್ಯ ಲಕ್ಷಣಗಳು. ತೆಳು ಕೆಂಪಿನ ಬಣ್ಣ ಮತ್ತು ನುಣುಪಾದ ಹೊಳೆಯುವ ಹುರುಪೆಗಳು ಇದಕ್ಕಿವೆ. ಈ ಹಾವಿಗೆ ತುಂಬ ತಾಳ್ಮೆ ಇದೆ, ಕಚ್ಚುವುದಿಲ್ಲ.  ಆದ್ದರಿಂದ ಮಕ್ಕಳಲ್ಲಿ ಹಾವುಗಳ ಬಗ್ಗೆ ಧೈರ್ಯ ಮೂಡಿಸಲು ಮತ್ತು ಕೈಯಿಂದ ಮುಟ್ಟಿಸಲು ಈ ಹಾವು ಅತ್ಯಂತ ಯುಕ್ತವಾದುದು. ಇದು ಇಲಿ, ಕಪ್ಪೆ ಮತ್ತು ಹಲ್ಲಿಗಳನ್ನು ತಿನ್ನುತ್ತದೆ. ಬಿಲಗಳಲ್ಲಿ ನುಗ್ಗಿ ಇಲಿ ಹಿಡಿದು ತಿನ್ನುವುದರಲ್ಲಿ ಇದು ನಿಸ್ಸೀಮ.


ನೆಲದ ಮೇಲಿನ ಇತರ ಹಾವುಗಳು
ನೆಲದ ಮೇಲೆ ವಿವಿಧ ರೀತಿಯ ಹಾವುಗಳು ಜೀವಿಸುತ್ತವೆ. ಅವುಗಳಲ್ಲಿ ಕೇರೆಹಾವು, ಹೆಬ್ಬಾವು, ತೋಳದ ಹಾವು, ಕಟುಗಲ ಹಾವು ಮುಖ್ಯವಾದವು.
ಕೇರೆಹಾವು ಸಾಮಾನ್ಯವಾಗಿ ಎಲ್ಲ ಸ್ಥಳಗಳಲ್ಲಿ ಕಂಡು ಬರುತ್ತದೆ. ಸುಮಾರು ೨ ಮೀಟರ್ ಉದ್ದದ ಶರೀರ, ತೆಳುವಾದ ಕುತ್ತಿಗೆ ದೊಡ್ಡ ಕಣ್ಣುಗಳು, ಮಾಸಲು ಹಳದಿ ಬಣ್ಣದ ಮೈ, ವೇಗದ ಚಲನೆ ಮತ್ತು ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ – ಇವು ಕೇರೆಹಾವಿನ ಮುಖ್ಯ ಲಕ್ಷಣಗಳು. ಈ ಹಾವನ್ನು ನಾಗರಹಾವೆಂದು ತಿಳಿಯುವ ಸಾಧ್ಯತೆ ಹೆಚ್ಚು. ಆದರೆ ನಾಗರಹಾವಿಗಿಂತ ಉದ್ದನೆಯ ಮತ್ತು ತೆಳುವಾದ ಶರೀರ ಕೇರೆಹಾವಿಗಿದೆ.  ನಾಗರಹಾವಿನ ಕುತ್ತಿಗೆ ದಪ್ಪ, ಹೆಡೆ ಗುರುತು ಅದಕ್ಕಿದೆ. ಕೇರೆ ಹಾವಿನ ಕುತ್ತಿಗೆ ತೆಳುವಾಗಿರುತ್ತದೆ.  ಇದಕ್ಕೆ ನಾಗರಹಾವಿಗಿಂತ ಚೂಪಾದ ತಲೆ ಮತ್ತು ಅಗಲವಾದ ಕಣ್ಣು ಇದೆ.
ಹುತ್ತ ಮತ್ತು ಇಲಿಯ ಬಿಲಗಳಲ್ಲಿ ಸಾಮಾನ್ಯವಾಗಿ ವಾಸಿಸುವ ಕೇರೆ ಹಾವುಗಳು ಹುಲ್ಲುಗಾವಲು, ಭತ್ತದ ಗದ್ದೆ ಮತ್ತು ಉಗ್ರಾಣಗಳ ಹತ್ತಿರ ಇಲಿಗಳನ್ನು ಹುಡುಕಿಕೊಂಡು ಬರುತ್ತವೆ.  ಇಲಿಯೆಂದರೆ ಈ ಹಾವುಗಳಿಗೆ ಪಂಚಪ್ರಾಣ.  ಆದ್ದರಿಂದ ಇವನ್ನು ಇಲಿಹಾವು ಗಳೆಂದೂ ಕರೆಯುತ್ತಾರೆ. ಬೆಳಗಿನ ಹೊತ್ತು ಚಟುವಟಿಕೆಯಿಂದಿರುವ ಈ ಹಾವುಗಳು ಮನುಷ್ಯನ ವಾಸದ ಸುತ್ತಮುತ್ತ ಬದುಕಿದರೂ, ಮನುಷ್ಯನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುತ್ತವೆ.  ಹೆದರಿದಾಗ ಗಂಟಲನ್ನು ಹಿಗ್ಗಿಸಿ ಬುಸುಗುಟ್ಟುತ್ತವೆ ಮತ್ತು ಕಚ್ಚಲು ಮುಂದಾಗುತ್ತವೆ. ವಿಷವಲ್ಲದ ಕಡಿತ ಸಾಕಷ್ಟು ನೋವುಂಟು ಮಾಡಬಲ್ಲದು. ಇದರ ಬಾಲಕ್ಕೆ ಸುತ್ತಿಕೊಳ್ಳುವ ಶಕ್ತಿಯಿದೆ. ತುಳಿದ ವ್ಯಕ್ತಿಯ ಕಾಲಿಗೆ ಅಥವಾ ಬೇಟೆಯ ಶರೀರಕ್ಕೆ ಸುತ್ತಿಕೊಂಡು ಒಂದು ವಿಶಿಷ್ಟ ಗಂಟು ಹಾಕಬಲ್ಲುದು.  ಆದ್ದರಿಂದ ಕೆಲವರು ಈ ಹಾವಿಗೆ ಬಾಲದಲ್ಲಿ ವಿಷವಿದೆ, ಬಾಲದಿಂದ ಕಚ್ಚುತ್ತದೆ ಎಂದು ತಪ್ಪಾಗಿ ತಿಳಿದಿದ್ದಾರೆ. ಹೆಣ್ಣು ಕೇರೆಹಾವು ೮ ರಿಂದ ೧೬ ಮೊಟ್ಟೆಗಳನ್ನಿಡುತ್ತದೆ. ಇವು ೬೦ ದಿನಗಳಲ್ಲಿ ಒಡೆದು ಮರಿಗಳು ಹೊರಬರುತ್ತವೆ. ಮರಿಗಳು ಕಪ್ಪೆಗಳನ್ನು ತಿನ್ನುತ್ತಾ ಬೆಳೆಯುತ್ತವೆ.  ಬೆದೆಕಾಲದಲ್ಲಿ ಗಂಡು ಕೇರೆಹಾವು ತನ್ನ ಕ್ಷೇತ್ರಕ್ಕೆ ಬೇರೆ ಗಂಡು ಕೇರೆಹಾವು ಬಂದರೆ ಜಗಳಕ್ಕೆ ಇಳಿಯುತ್ತದೆ.  ಆಗ ಇವು ಒಂದಕ್ಕೊಂದು ಸುತ್ತಿಕೊಂಡು ಎದುರಾಳಿಯ ತಲೆಯನ್ನು ನೆಲಕ್ಕೆ ತಗುಲಿಸಲು ಪ್ರಯತ್ನಿಸುತ್ತವೆ.
ಈ ರೀತಿಯ ಕುಸ್ತಿಯನ್ನು ಅನೇಕರು ಗಂಡು-ಹೆಣ್ಣು ಹಾವುಗಳ ಕೂಡುವಿಕೆ ಅಥವಾ ಬೆಣೆಯೆಂದು ತಪ್ಪಾಗಿ ಭಾವಿಸುತ್ತಾರೆ.


ಹೆಬ್ಬಾವುಗಳು 
ಜಗತ್ತಿನ ಅತಿ ದೊಡ್ಡ ಹಾವುಗಳಲ್ಲಿ ಹೆಬ್ಬಾವುಗಳೂ ಸೇರಿವೆ. ೮ ರಿಂದ ೯ ಮೀಟರ್ ಉದ್ದ ಬೆಳೆಯುವ ಇವು ಚೆನ್ನಾಗಿ ಬೆಳೆದಿರುವ ಚಿರತೆಯನ್ನು ಸೋಲಿಸಿ ನುಂಗಬಲ್ಲವು. ಇವುಗಳಲ್ಲಿ ಎರಡು ಪ್ರಭೇದಗಳಿವೆ. ಭಾರತದ ಕಲ್ಲು ಹೆಬ್ಬಾವು ಮತ್ತು ರಾಜ ಹೆಬ್ಬಾವು.
ಕಲ್ಲು ಹೆಬ್ಬಾವು ಅಥವಾ ದಾಸರ ಹಾವು ೩ ರಿಂದ ೬ ಮೀಟರ್ ಉದ್ದವಿರುತ್ತದೆ. ಬಾಣದ ತುದಿಯಂತಹ ಚೂಪಾದ ತಲೆ, ದಪ್ಪನೆಯ, ದುಂಡು ದುಂಡಾದ ಶರೀರ, ನುಣುಪಾದ ಹುರುಪೆಗಳು, ಹೊಳೆಯುವ ಮಚ್ಚೆಯ ಸಾಲು ಮತ್ತು ಮೊಂಡು ಬಾಲ – ಇದರ ಮುಖ್ಯ ಲಕ್ಷಣಗಳು. ಹಳದಿ ಅಥವಾ ಕಂದು ಬಣ್ಣದ ಮಚ್ಚೆಗಳು ಅನುಕ್ರಮವಾಗಿರದೆ ಹರಿದ ಬಟ್ಟೆಯಂತಿರುತ್ತವೆ. ಶರೀರದ ತಳಭಾಗಕ್ಕೆ ತಿಳಿಹಳದಿ ಅಥವಾ ಕಿತ್ತಲೆ ಬಣ್ಣವನ್ನು ಹೊಂದಿರುತ್ತದೆ. ಗುದದ್ವಾರದ ಬಳಿ ಎರಡು ಚೂಪಾದ ಮುಳ್ಳುಗಳಿರುತ್ತವೆ. ಇವು ಹಿಂಗಾಲುಗಳ ಅವಶೇಷಗಳು. ಎಲ್ಲಾ ಕಾಡುಗಳಲ್ಲಿ ಇವು ವಾಸಿಸುತ್ತವೆ. ಕಲ್ಲು ಬಂಡೆಗಳ ಸಂದು-ಗೊಂದುಗಳು, ಗವಿಗಳು, ಮರದ ಪೊಟರೆಗಳು, ಮೊಲದ ಬಿಲಗಳು ಈ ಹಾವುಗಳ ವಾಸಸ್ಥಾನ.
ಸಾಮಾನ್ಯವಾಗಿ ಹೆಬ್ಬಾವುಗಳು ಇಲಿ, ಪಕ್ಷಿ, ನರಿ ಮತ್ತು ಬೆಕ್ಕುಗಳನ್ನು ನುಂಗುತ್ತವೆ. ಒಮ್ಮೊಮ್ಮೆ ಚಿರತೆ, ಜಿಂಕೆ, ಮೇಕೆ ಮತ್ತು ಕಾಡು ಹಂದಿಗಳನ್ನೂ ತಿನ್ನುವುದುಂಟು.  ಬೇಟೆಯ ಹತ್ತಿರ ನಿಧಾನವಾಗಿ ಕದ್ದು ಚಲಿಸಿ, ಅನಂತರ ಮಿಂಚಿನಂತೆ ಬೇಟೆಯ ಮೇಲೆರಗಿ ಅದರ ಮೈಯನ್ನು ಸುತ್ತಿ ಬೇಟೆಯನ್ನು ಹಿಸುಕಿ ಸಾಯಿಸುತ್ತದೆ. ಹೆಬ್ಬಾವು ಮನುಷ್ಯನನ್ನು ನುಂಗಿದ ಯಾವುದೇ ಅಧಿಕೃತ ವರದಿ ಸಿಕ್ಕಿಲ್ಲ. ಇವು ನಿಶಾಚಾರಿಗಳು, ಒಳ್ಳೆಯ ಬೇಟೆಯನ್ನು ನುಂಗಿದ ಅನಂತರ ಈ ಹಾವು ಕೆಲವು ದಿನ ಅಥವಾ ವಾರಗಳ ಕಾಲ ಆಲಸಿಯಂತೆ ಕಾಲ ಕಳೆಯುತ್ತದೆ. ರಾಜ ಹೆಬ್ಬಾವು ನಿಕೋಬಾರ್ ದ್ವೀಪಗಳಲ್ಲಿ ವಾಸಿಸುತ್ತವೆ.  ಇವು ೮ ರಿಂದ ೧೦ ಮೀಟರ್ ಉದ್ದವಿರುತ್ತದೆ.


ಕಟ್ಟುಹಾವು
ಹುಲ್ಲು ಇರುವ ಜಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಾವುಗಳನ್ನು “ಹುಲ್ಲು ಹಾವು” ಎಂದು ಕರೆಯುತ್ತಾರೆ. ಭತ್ತದ ಗದ್ದೆಗಳ ಬದುಗಳಲ್ಲಿ, ಕೊಳ ಹಾಗೂ ಸರೋವರದ ದಡಗಳಲ್ಲಿ, ಹುಲ್ಲು ಬೆಳೆದಿರುವ ಜಾಗಗಳಲ್ಲಿ ಮತ್ತು ಪೊದೆಗಳಲ್ಲಿ ಇವು ವಾಸಿಸುತ್ತವೆ. ಬೆಳಗಿನ ಹೊತ್ತು ಚಟುವಟಿಕೆಯಿಂದಿರುತ್ತವೆ ಮತ್ತು ರಾತ್ರಿಯ ಹೊತ್ತು ಕಲ್ಲು ಬಂಡೆಗಳ ಸಂದುಗಳಲ್ಲಿ, ಮರದ ಪೊಟರೆಗಳಲ್ಲಿ ಮತ್ತು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಇವು ಸುಮಾರು ೪೦ ರಿಂದ ೮೦ ಸೆಂ.ಮೀ. ಉದ್ದ ಬೆಳೆಯುತ್ತವೆ.  ಚಿಕ್ಕ ಶರೀರ, ಒರಟು ಹುರುಪೆಗಳು, ತಿಳಿ ಅಥವಾ ಕಂದು ಬಣ್ಣದ ಶರೀರ, ಬೆನ್ನಿನ ಮೇಲೆ ಎರಡು ಹಳದಿಯ ಉದ್ದನೆಯ ಪಟ್ಟೆಗಳು – ಈ ಹಾವುಗಳ ಮುಖ್ಯ ಲಕ್ಷಣಗಳು. ತಲೆಯಲ್ಲಿ ಕಂದು ಬಣ್ಣವಿದ್ದರೂ, ದವಡೆ, ಕೆನ್ನೆ ಮತ್ತು ಪಾರ್ಶ್ವಭಾಗದಲ್ಲಿ ಬಿಳಿ ಅಥವಾ ಹಳದಿ ಬಣ್ಣ. ಹೆದರಿದಾಗ ಈ ಹಾವು ಚಿಕ್ಕ ಹೆಡೆಯನ್ನು ಬಿಚ್ಚುವುದು. ಆದರೆ ಕೈಯಿಂದ ಈ ಹಾವನ್ನು ಹಿಡಿದರೂ ಕಚ್ಚುವುದು ಅಪರೂಪ.
ಇವು ನೆಲಗಪ್ಪೆ, ಸಣ್ಣ ಹಲ್ಲಿ ಮತ್ತು ಇಲಿಗಳನ್ನು ತಿನ್ನುತ್ತವೆ. ಮರಿ ಹಾವುಗಳು, ಕೀಟ, ಗೊದಮೊಟ್ಟೆ ಮತ್ತು ಸಣ್ಣ ನೆಲಗಪ್ಪೆಗಳನ್ನು ತಿನ್ನುತ್ತವೆ. ಹೆಣ್ಣು ಹಾವು ೮-೧೨ ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ತೋಟಗಳಲ್ಲಿ ಕಂಡು ಬರುವ ಈ ಹಾವನ್ನು ‘ಮರಿ ನಾಗರ’ವೆಂದು ತಪ್ಪಾಗಿ ತಿಳಿದು ಸಾಯಿಸುತ್ತಾರೆ. ಆದರೆ ಇದು ಸೌಮ್ಯವಾದ ನಿರುಪದ್ರವಿ ಪ್ರಾಣಿ.


ತೋಳ ಹಾವುಗಳು
ಸುಮಾರು ೩೦ ರಿಂದ ೮೦ ಸೆಂ.ಮೀ. ಉದ್ದನೆಯ ತೆಳು ಶರೀರದ ಈ ಹಾವುಗಳು ಸಾಮಾನ್ಯವಾಗಿ ಮನೆಗಳ ಆಸುಪಾಸಿನಲ್ಲಿ ಕಂಡುಬರುತ್ತವೆ.  ಆದ್ದರಿಂದ ಇದನ್ನು ‘ಗೃಹವಾಸಿ’ ಹಾವುಗಳೆಂದು ಕರೆಯುತ್ತಾರೆ. ಕೆಲವು ಕಡೆ ಕಟುಗಲ ಹುಳು ಅಥವಾ ಕಟುಗಲ ಹಾವೆಂದು ಕರೆಯುತ್ತಾರೆ. ನುಣುಪಾದ ಹೊಳೆಯುವ ಹುರುಪೆಗಳು, ಕಂದು ಅಥವಾ ಕರಿಯ ಬಣ್ಣದ ಶರೀರದ ಮೇಲೆ ೧೦ ರಿಂದ ೨೦ ತೆಳುವಾದ ಬಿಳಿ ಅಥವಾ ಹಳದಿಯ ಅಡ್ಡ ಪಟ್ಟೆಗಳು, ಹೊರಚಾಚಿರುವ ಕಡು ಕಪ್ಪು ಬಣ್ಣದ ಕಣ್ಣುಗಳು – ಮುಖ್ಯ ಲಕ್ಷಣಗಳು. ತಲೆ ಚಪ್ಪಟೆ ಹಾಗೂ ಚೂಪಾಗಿರುತ್ತದೆ.
ಇವು ಕಲ್ಲು ಗುಡ್ಡೆ, ಗುಹೆ, ಮರದ ಪೊಟರೆ, ದಿಮ್ಮಿಗಳ ಕೆಳಗೆ ವಾಸಿಸುತ್ತವೆ. ಮಣ್ಣು ಗುಡ್ಡೆ, ಇಟ್ಟಿಗೆ ಗೂಡು, ಸಿಮೆಂಟ್ ಕಟ್ಟಡದ ಸಂದುಗಳು, ಕಟ್ಟಿಗೆ ಹೊರೆಗಳು, ಈ ಜಾತಿಯ ಹಾವುಗಳಿಗೆ ಹೇಳಿ ಮಾಡಿಸಿದಂತಹ ಜಾಗಗಳು, ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ಹಲ್ಲಿಗಳಿರುವುದರಿಂದ, ಹಾವುಗಳಿಗೆ ಸುಲಭವಾಗಿ ಆಹಾರ ದೊರಕುತ್ತದೆ. ಇವು ನಿಶಾಚರಿಗಳು, ಮರಗಳನ್ನು ಮತ್ತು ಒರಟಾದ ಗೋಡೆಗಳನ್ನು ಹತ್ತಬಲ್ಲವು. ಇವುಗಳ ಮುಂದವಡೆಯ ಹಲ್ಲುಗಳು ಕೋರೆ ಹಲ್ಲುಗಳಂತೆ ಉದ್ದವಾಗಿರುತ್ತವೆ. ಆದ್ದರಿಂದ ಇವನ್ನು ತೋಳದ ಹಾವುಗಳೆಂದೂ ಕರೆಯುತ್ತಾರೆ. ಇವು ಸಣ್ಣ ಹಲ್ಲಿ, ಕಪ್ಪೆ, ಹಾವುರಾಣಿಗಳನ್ನು ತಿನ್ನುತ್ತವೆ. ೫-೭ ಮೊಟ್ಟೆಗಳನ್ನಿಡುತ್ತವೆ. ಸಾಮಾನ್ಯವಾಗಿ ಇವನ್ನು ಕಡಂಬಳ ಹಾವುಗಳೆಂದು ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ಇವುಗಳಲ್ಲಿ ಬಿಳಿಯ ಪಟ್ಟೆಗಳು ತಲೆಯ ಹತ್ತಿರ ಚೆನ್ನಾಗಿ ಕಾಣುತ್ತದೆ.  ಬಾಲದ ಹತ್ತಿರ ಇವು ಚೆನ್ನಾಗಿ ಕಾಣುವುದಿಲ್ಲ. ಆದರೆ ಕಡಂಬಳ ಹಾವುಗಳಲ್ಲಿ ಬಿಳಿಯ ಅಡ್ಡಪಟ್ಟೆಗಳು ತಲೆಯ ಹತ್ತಿರ ಚೆನ್ನಾಗಿ ಕಾಣದೆ ಬಾಲದ ಹತ್ತಿರ ಚೆನ್ನಾಗಿ ಕಂಡುಬರುತ್ತವೆ.


ಮರದ ಹಾವುಗಳು
ಮರಗಳಲ್ಲಿ ವಾಸಿಸುವ  ಹಾವುಗಳು ತೆಳುವಾದ ಉದ್ದ ಶರೀರ ಹೊಂದಿರುತ್ತವೆ.  ಇವು ವೇಗವಾಗಿ ಚಲಿಸಬಲ್ಲವು, ಇವುಗಳ ದೃಷ್ಟಿ ತೀಕ್ಷ್ಣ. ಇವುಗಳನ್ನು ಹಸಿರು ಹಾವುಗಳು, ಬೆಕ್ಕು ಹಾವುಗಳು ಮತ್ತು ತಾಮ್ರದ ಬೆನ್ನಿನ ಹಾವುಗಳೆಂದು ವಿಂಗಡಿಸಬಹುದು.
ಗಿಳಿ ಹಸಿರು ಬಣ್ಣದ ಹಸಿರು ಹಾವುಗಳನ್ನು (ವೈನ್ ಸ್ನೇಕ್) ಎಲೆಗಳ ನಡುವೆ ಗುರುತಿಸುವುದೇ ಕಷ್ಟ. ಒಂದರಿಂದ ಎರಡು ಮೀಟರ್ ಉದ್ದದ ತೆಳುವಾದ ಶರೀರ, ಚೂಪಾದ ತ್ರಿಕೋನಾಕಾರದ ತಲೆ, ದೊಡ್ಡಕಣ್ಣುಗಳು ಮತ್ತು ಹಸಿರು ಬಣ್ಣದ ಮೈ – ಇವು ಈ ಹಾವುಗಳ ಮುಖ್ಯ ಲಕ್ಷಣಗಳು. ಹಾವಿನ ತಳಭಾಗ ತಿಳಿಯಾದ ಹಸಿರು ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹುರುಪೆಗಳು ನುಣುಪಾಗಿರುತ್ತವೆ, ಆದರೆ ಹೊಳೆಯುವುದಿಲ್ಲ. ಇವಕ್ಕೆ ಸಿಟ್ಟು ಬಂದಾಗ ಶರೀರವನ್ನು ಊದಿಸಿಕೊಂಡು ಅಗಲವಾಗಿ ಬಾಯಿ ತೆರೆದು ಹೆದರಿಸುತ್ತವೆ. ಹಲ್ಲಿ, ಕಪ್ಪೆ ಮತ್ತು ಚಿಕ್ಕ ಪುಟ್ಟ ಪಕ್ಷಿಗಳನ್ನು ತಿನ್ನುತ್ತವೆ. ಇವುಗಳ ಹಿಂದಿನ ಹಲ್ಲುಗಳಲ್ಲಿ ವಿಷವಿದ್ದು, ಅವು ಬೇಟೆಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇವು ಒಮ್ಮೆಗೆ ಸುಮಾರು ೮ ಮರಿ ಹಾಕುತ್ತವೆ. ಕೆಲವು ಕಡೆ ಈ ಹಾವುಗಳನ್ನು ರಾಮಬಾಣದ ಹಾವುಗಳೆಂದು ಕರೆಯುತ್ತಾರೆ. ಇವು ಅತ್ಯಂತ ವಿಷಕಾರಿಯೆಂದು, ಕಚ್ಚಿದರೆ ಸಾವು ಬರುತ್ತದೆಂದು ತಪ್ಪು ನಂಬಿಕೆಯಿರುವುದರಿಂದ ಸಾಮಾನ್ಯವಾಗಿ ಕಂಡ ತಕ್ಷಣ ಇವನ್ನು ಕೊಲ್ಲುತ್ತಾರೆ. ಇನ್ನೂ ಕೆಲವು ಕಡೆ ಇವು ಕಣ್ಣಿಗೆ ಚುಚ್ಚಿ ಕುರುಡರನ್ನಾಗಿ ಮಾಡುತ್ತವೆಂದು ನಂಬುತ್ತಾರೆ.
ಬೆಕ್ಕು ಹಾವುಗಳು (ಕ್ಯಾಟ್ ಸ್ನೇಕ್) ತುಂಬ ತೆಳುವಾದ ಶರೀರ ಹೊಂದಿವೆ.  ಸುಮಾರು ೬೫ ಸೆಂ.ಮೀ.ನಿಂದ ೧.೨೫ ಮೀ. ಉದ್ದದ ಶರೀರ, ಸಣ್ಣ ಕುತ್ತಿಗೆ, ಚಪ್ಪಟೆಯ ತಲೆ, ದೊಡ್ಡ ಕಣ್ಣುಗಳು ಮತ್ತು ಚೂಪಾದ ಉದ್ದ ಬಾಲ – ಇವುಗಳ ಮುಖ್ಯ ಲಕ್ಷಣಗಳು. ಕಂದು ಬಣ್ಣದ ಶರೀರದಲ್ಲಿ ಬಿಳಿಯ ಗೀಟುಗಳಿರುತ್ತವೆ. ತಲೆಯ ಮೇಲೆ ‘Y’ ಆಕಾರದ ಗುರುತಿರುತ್ತದೆ. ಇವುಗಳಲ್ಲಿ ಹನ್ನೊಂದು ಪ್ರಭೇದಗಳಿವೆ. ನೋಡಲು ಒಮ್ಮೊಮ್ಮೆ ವಿಷದ ಕಲ್ಲು ಹಾವು (Indian Little Viper) ಗಳಂತೆ ಕಾಣುತ್ತವೆ. ಇವು ತೆಂಗಿನ ಗರಿಗಳಿಗೆ ಸುತ್ತಿಕೊಂಡಿರುತ್ತವೆ. ತೆಂಗಿನ ಗರಿಗಳ ಗುಡಿಸಲುಗಳಲ್ಲೂ ಕಂಡು ಬರುತ್ತವೆ. ಇವು ನಿಶಾಚರಿಗಳು.
ಮರದ ಹಾವುಗಳಲ್ಲಿ ಹಾರುವ ಹಾವು ಬಹಳ ಪ್ರಸಿದ್ಧ (Chrysopelea omata). ಇದು ಸುಮಾರು ೩೦ ಮೀಟರ್ ಎತ್ತರದಿಂದ ಜಿಗಿದು ಗಾಳಿಯಲ್ಲಿ ತನ್ನ ಶರೀರವನ್ನು ಅಗಲ ಮಾಡಿಕೊಂಡು ನಿಧಾನವಾಗಿ ನೆಲದ ಮೇಲಿಳಿಯುತ್ತದೆ.  ಇದರ ಶರೀರಕ್ಕೆ ಕಪ್ಪು ಮಿಶ್ರಿತ ಹಳದಿ ಬಣ್ಣವಿದೆ. ಬಿಳಿ ಮತ್ತು ಕೆಂಪು ಚುಕ್ಕೆಗಳು ಅದರ ಮೇಲೆ ಕಂಡು ಬರುತ್ತವೆ.  ಒಮ್ಮೆಗೆ ಇದು ೬ ರಿಂದ ೧೨ ಮೊಟ್ಟೆಗಳನ್ನಿಡುತ್ತದೆ.
ತಾಮ್ರದ ಬೆನ್ನಿನ ಹಾವುಗಳು (Dendrelaphis tristis) ಗುಡಿಸಲುಗಳ ತೆಂಗಿನ ಗರಿ ಕೆಳಗೆ ಮತ್ತು ತೋಟಗಳಲ್ಲಿ ಕಂಡು ಬರುತ್ತವೆ.  ಒಂದರಿಂದ ೧.೫ ಮೀಟರ್ ಉದ್ದದ ತೆಳುವಾದ ಶರೀರ, ನುಣುಪಾದ ಹುರುಪೆಗಳು, ಮೈಮೇಲೆ ಕಂದು ಅಥವಾ ತಾಮ್ರವರ್ಣದ ಉದ್ದನೆಯ ಪಟ್ಟಿ – ಇವು ಈ ಹಾವುಗಳ ಮುಖ್ಯ ಲಕ್ಷಣಗಳು. ಇವುಗಳಲ್ಲಿ ೮ ಪ್ರಭೇದಗಳಿವೆ. ಜಾಲಿ ಮರ, ಈಚಲು ಮರ, ತಾಟೆನಿಂಗು ಮರಗಳಲ್ಲಿ ವಿಶೇಷವಾಗಿ ಕಂಡು ಬರುತ್ತವೆ.  ಮರಗಳಲ್ಲಿ ಕಂಡು ಬರುವ ಹಲ್ಲಿ ಮತ್ತು ಕಪ್ಪೆಗಳನ್ನು ಇವು ತಿನ್ನುತ್ತವೆ. ಹೆಣ್ಣು ಹಾವು ೬ ಉದ್ದನೆಯ ಮತ್ತು ತೆಳುವಾದ ಮೊಟ್ಟೆಗಳನ್ನಿಡುತ್ತದೆ.


ನೀರು ಹಾವುಗಳು
ಇವು ಸಿಹಿ ನೀರಿನಲ್ಲಿ ಜೀವಿಸುವ ಹಾವುಗಳು. ಇವುಗಳ ಶರೀರ ತುಂಬ ತೆಳುವೂ ಅಲ್ಲ, ದಪ್ಪವೂ ಅಲ್ಲ. ನೀರಿನಲ್ಲಿ ಸುಲಭವಾಗಿ ಈಜಬಲ್ಲ ಇವು ನೆಲದ ಮೇಲೆ ತೆವಳಲು ಕಷ್ಟ ಪಡುತ್ತವೆ. ಇವುಗಳ ಎಲ್ಲಾ ಹುರುಪೆಗಳು ಸ್ವಲ್ಪವಾದರೂ ಮಡಚಿಕೊಂಡಿರುತ್ತವೆ. ಆದ್ದರಿಂದ ನೀರು ಹಾವುಗಳನ್ನು ಬೆನ್ನು ಮಡಿಕೆ ಹಾವುಗಳೆಂದು ಕರೆಯುತ್ತಾರೆ. ಭಾರತದಲ್ಲಿನ ಯಾವುದೇ ನೀರು ಹಾವು ವಿಷದ ಹಾವಲ್ಲ. ಇವಕ್ಕೆ ಚೂಪಾದ ಹಲ್ಲುಗಳಿವೆ. ಆದ್ದರಿಂದ ಇವು ಕಚ್ಚಿದಾಗ ಗಾಯಗಳಾಗಬಹುದು. ಹೆಚ್ಚು ಕಂಡು ಬರುವ ನೀರು ಹಾವುಗಳೆಂದರೆ ಚುಕ್ಕೆಗಳ ನೀರು ಹಾವು, ಹಸಿರು ನೀರುಹಾವು ಮತ್ತು ನಾಯಿ ಮುಖದ ನೀರುಹಾವು.
ಚುಕ್ಕೆಗಳ ಬೆನ್ನು ಮಡಿಕೆ ಹಾವಿನ ಕಪ್ಪು ಅಥವಾ ಹಳದಿ ಬಣ್ಣದ ಶರೀರದ ಮೇಲೆ ಬಿಳಿ ಮತ್ತು ಕಪ್ಪು ಚುಕ್ಕೆಗಳಿವೆ. ಕಣ್ಣಿನ ಮೇಲೆ ಕಪ್ಪುಗೆರೆ ಹಾಗೂ ನೀಳವಾದ ತಲೆಯಿರುತ್ತದೆ. ಹಾವಿನ ತಳಭಾಗ ಬೆಳ್ಳಗೆ ಹೊಳೆಯುತ್ತಿರುತ್ತದೆ. ಸುಮಾರು ೬೦ ಸೆಂ.ಮೀ. ನಿಂದ ೧.೭೫ ಮೀಟರ್‌ವರೆಗೂ ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ ಸಿಹಿನೀರು ಇರುವ ಎಲ್ಲ ಸ್ಥಳಗಳಲ್ಲಿಯೂ ಕಂಡು ಬರುತ್ತದೆ. ಹಗಲು ಮತ್ತು ರಾತ್ರಿಯ ವೇಳೆ ಸರೋವರ, ನದಿ ಮತ್ತು ಭತ್ತದ ಗದ್ದೆಗಳ ದಡದಲ್ಲಿ ಬೇಟೆಯಾಡುತ್ತಾ ಕಾಲ ಕಳೆಯುತ್ತದೆ. ಹೆದರಿಸಿದಾಗ ತಲೆಯನ್ನು ಚಪ್ಪಟೆ ಮಾಡಿ ನಾಗರಹಾವಿನಂತೆ ತಲೆ ಎತ್ತುತ್ತದೆ.  ವಿಷವಲ್ಲದ ಪ್ರಾಣಿಯಾದರೂ ಹಿಡಿದಾಗ ರೋಷದಿಂದ ಕಚ್ಚುತ್ತದೆ.  ಹೆಣ್ಣು ಹಾವು ನೀರಿನ ದಡದ ಬಿಲಗಳಲ್ಲಿ ೨೦-೪೦ ಮೊಟ್ಟೆಗಳನ್ನಿಟ್ಟು ಮೊಟ್ಟೆಯೊಡೆದು ಮರಿಗಳು ಹೊರಬರುವವರೆಗೂ ರಕ್ಷಣೆ ನೀಡುತ್ತದೆ.
ಅವಿಲ್ ಹಸಿರು ನೀರು ಹಾವು (Astretium schistosum) ೪೫ ಸೆಂ.ಮೀ.ನಿಂದ ಒಂದು ಮೀಟರ್ ಉದ್ದದ ಶರೀರ ಪಡೆದಿದೆ. ಮಬ್ಬು ಹಳದಿ ಛಾಯೆಯ ಕಡು ಹಸಿರು ಬಣ್ಣದ ಶರೀರ, ಚಿಕ್ಕದಾದ ತಲೆ ಮತ್ತು ತಳಭಾಗದಲ್ಲಿ ಹಳದಿ ಬಣ್ಣ – ಇವು ಈ ಹಾವಿನ ಮುಖ್ಯ ಲಕ್ಷಣಗಳು. ಕೆರೆ ಮತ್ತು ಹೊಂಡಗಳಲ್ಲಿ ವಿಶೇಷವಾಗಿ ಕಂಡು ಬರುವ ಈ ಹಾವುಗಳು ಏಡಿಗಳ ಬಿಲಗಳಲ್ಲಿ ವಾಸಿಸುತ್ತವೆ. ಇವನ್ನು ಕೈಯಿಂದ ಹಿಡಿದಾಗ ಸಾಮಾನ್ಯವಾಗಿ ಕಚ್ಚುವುದಿಲ್ಲ. ನೀರಿನಲ್ಲಿ ಸೊಳ್ಳೆಮರಿ ಮತ್ತು ಗೊದಮೊಟ್ಟೆಗಳನ್ನು ಇವು ತಿನ್ನುತ್ತವೆ. ಸೊಳ್ಳೆ ನಿಯಂತ್ರಣದಲ್ಲಿ ಇವು ಸಹಾಯಕ.
ನಾಯಿ ಮುಖದ ಹಾವು (Cerberusrhynchops) ಉಪ್ಪು ತಯಾರಿಸುವ ತೊಟ್ಟಿಗಳಲ್ಲಿ, ಒಳನುಗ್ಗಿದ ಕಡಲ ನೀರಿನ ಹೊಂಡಗಳಲ್ಲಿ ಮತ್ತು  ನದಿನೀರು ಸಮುದ್ರಕ್ಕೆ ಸೇರುವ ಜಾಗಗಳಲ್ಲಿ ಕಂಡು ಬರುತ್ತವೆ.  ಸುಮಾರು ೭೫ ರಿಂದ ೧೧೦ ಸೆಂ.ಮೀ. ಉದ್ದದ ಶರೀರ, ಕಣ್ಣಿನ ಹಿಂಭಾಗದಲ್ಲಿ ಎರಡು ಕಪ್ಪು ಪಟ್ಟೆಗಳು. ಉದ್ದನೆಯ ಮುಸುಡಿಯ ತಲೆ, ಮೈಮೇಲೆ ಕಪ್ಪು ಬಣ್ಣದ ಚುಕ್ಕೆಗಳು ಮತ್ತು ಪಟ್ಟೆಗಳು – ಇವು ಈ ಹಾವಿನ ಮುಖ್ಯ ಲಕ್ಷಣಗಳು.
ಎಲ್ಲಾ ನೀರು ಹಾವು ಅಥವಾ ಒಳ್ಳೆ ಹಾವುಗಳು ವಿಶೇಷವಾಗಿ ಮಳೆಗಾಲದಲ್ಲಿ ಕಂಡುಬರುತ್ತವೆ. ಒಮ್ಮೊಮ್ಮೆ ರಸ್ತೆಗಳಲ್ಲಿಯೂ ಕಂಡು ಬರುತ್ತವೆ. ಚರ್ಮಕ್ಕಾಗಿ ಈ ಹಾವುಗಳನ್ನು ಲಕ್ಷಗಟ್ಟಲೆ ಕೊಲ್ಲುತ್ತಾರೆ. ಆದ್ದರಿಂದ ಇವುಗಳ ಜೀವನ ಅಪಾಯದ ಅಂಚಿನಲ್ಲಿದೆ. ಈ ಹಾವುಗಳು ಕಚ್ಚಿದಲ್ಲಿ ಮೂರು ಬೊಗಸೆ ವಂಡು ನೀರನ್ನು ಕುಡಿಯಬೇಕೆಂಬ ನಂಬಿಕೆ ಕೆಲವರಲ್ಲಿದೆ.  ಇವು ವಿಷವಲ್ಲದ ಹಾವುಗಳಾಗಿದ್ದು ಜನರ ಭಯ ನಿವಾರಿಸಲು ಈ ನಂಬಿಕೆ ಬಂದಿರಬಹುದು.
ಹಾವಿನ ದ್ವೇಷ, ಹನ್ನೆರಡು ವರುಷ, ನನ್ನ ರೋಷ, ನೂರು ವರುಷ" - ಇದು ಜನಪ್ರಿಯ ಕನ್ನಡ ಚಲನಚಿತ್ರ ನಾಗರ ಹಾವು ಚಿತ್ರದ ಸದಾ ಹಸಿರಾಗಿರುವ ಹಾಡು. ಇದು ನಿಜವೇ? ಉತ್ತರ ಹುಡುಕ ಹೊರಟರೆ ನೂರಾರು ಪ್ರಶ್ನೆಗಳೇ ಎದುರಾಗುತ್ತವೆ. ಸಾಮಾನ್ಯವಾಗಿ ಹಾವುಗಳು ದ್ವೇಷವನ್ನಿರಿಸಿಕೊಳ್ಳುವುದು ಅಸಾಧ್ಯವಾದ ಸಂಗತಿ. ಏಕೆಂದರೆ, ಇವುಗಳ ಮೆದುಳು ಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಎಲ್ಲಾ ಹಾವುಗಳ ಆಯಸ್ಸೇ ಹನ್ನೆರಡು ವರ್ಷ ದಾಟುವುದಿಲ್ಲ. ಅಲ್ಲದೇ, ಹಾವುಗಳು ಚಲನೆಯಲ್ಲಿರುವ ವಸ್ತುಗಳನ್ನು ಮಾತ್ರ ಗುರುತಿಸಬಲ್ಲವು. ಪುಂಗಿಯ ನಾದಕ್ಕೆ ಅವು ತಲೆದೂಗುವುದಿಲ್ಲ, ಬದಲಾಗಿ ಪುಂಗಿಯ ಚಲನೆಗೆ ತಕ್ಕಂತೆ ತಲೆ ಆಡಿಸುತ್ತವೆ. ಹಾವುಗಳು ಹಾಲು ಕುಡಿಯುವುದೂ ಸಹ ಸುಳ್ಳಿನ ಕಂತೆ. ಶೀತ ರಕ್ತದ ಪ್ರಾಣಿಗಳಿಗೆ ಇವುಗಳ ಆಹಾರವಾದ ಇಲಿ, ಕಪ್ಪೆಗಳ ಶರೀರದಲ್ಲಿರುವ ನೀರಿನ ಅಂಶವೇ ಸಾಕು.

ಜಾನುವರುಗಳಲ್ಲಿ ಹಾವಿನ ಕಡಿತ ಸಾಮಾನ್ಯವಾದರೂ ಸಹ ಬಹಳಷ್ಟು ಸಂದರ್ಭಗಳಲ್ಲಿ ಇದು ಪತ್ತೆಯಾಗದೆ ಹೋಗುವುದೇ ಜಾಸ್ತಿ. ಏಕೆಂದರೆ, ನಾಗರಹಾವು ಮತ್ತು ಇನ್ನಿತರೇ ವಿಷಸರ್ಪಗಳ ಕಡಿತದಿಂದ ಸಾವು ಕೂಡಲೇ ಸಂಭವಿಸುವುದರಿಂದ ಚಿಕಿತ್ಸೆಗೆ ಮುನ್ನವೇ ಜಾನುವಾರು ಸಾವನ್ನಪ್ಪುತ್ತದೆ. ನಾಯಿಗಳಲ್ಲಿ ಮತ್ತು ಕುದುರೆಗಳಲ್ಲಿ ಹಾವಿನ ವಿಷಬಾಧೆ ಬಹಳ ತೀವ್ರವಾಗಿ ಇರುತ್ತದೆ. ನಾಯಿಗಳು ಕುತೂಹಲದಿಂದ ಹಾವುಗಳನ್ನು ಬೆನ್ನಟ್ಟಿದಾಗ, ಅವುಗಳ ಮೂತಿಯ ಮೇಲೆ ಹಾವಿನ ಕಡಿತವಾಗಬಹುದು. ಜಾನುವಾರುಗಳಾದರೆ, ಅವು ಮೇಯುವಾಗ ಮುಖ ಅಥವಾ ತುಳಿದರೆ ಕಾಲುಗಳ ಮೇಲೆ ಕಡಿತವುಂಟಾಗುತ್ತದೆ. ಶೇಕಡಾ 80 ರಷ್ಟು ಹಾವುಗಳು ವಿಷದ ಹಾವುಗಳಲ್ಲ. ಸುಮಾರು 3500 ರೀತಿಯ ಹಾವುಗಳಿದ್ದರೂ ಸಹ ಅವುಗಳಲ್ಲಿ ಕೇವಲ 400 ಹಾವುಗಳು ಮಾತ್ರ ವಿಷಕಾರಿ. ಆದರೆ, ಮನುಷ್ಯರಲ್ಲಿ ಇವುಗಳ ಕಡಿತದಿಂದಾಗುವ ಹೆದರಿಕೆಯಿಂದ ಹೃದಯಸ್ಥಂಬನವಾಗಿ ಸಾವು ಸಂಭವಿಸುತ್ತದೆ. ಅತ್ಯಂತ ವಿಷಕಾರಿ ಹಾವುಗಳಲ್ಲಿ ನಾಗರಹಾವು, ಕಾಳಿಂಗಸರ್ಪ, ಮಿಡನಾಗರ,  ಕೊಳಕು ಮಂಡಲ ಇತ್ಯಾದಿಗಳು ಸೇರಿವೆ.

ಹಾವಿನ ವಿಷದಲ್ಲಿ ವಿವಿಧ ರೀತಿಯ ಕಿಣ್ವಗಳು, ಪ್ರೋಟೀನ್ ಮತ್ತಿತರ ಮಿಶ್ರಣವೇ ಇರುತ್ತದೆ. ಕೆಲವು ಹಾವುಗಳ ವಿಷದಲ್ಲಿ ಶರೀರದಲ್ಲಿ ನಂಜು ತುಂಬಿ, ಆ ಭಾಗ ಕೊಳೆಯುವಂತೆ ಮಾಡುವ ವಿಶೇಷ ವಸ್ತುಗಳು ಇರುತ್ತವೆ. ಇವು ಕೊಳಕು ಮಂಡಲ ಮತ್ತಿತರ ರೀತಿಯ ಹಾವುಗಳಲ್ಲಿ ಸಾಮಾನ್ಯ. ಹಾವುಗಳು ಕಡಿದಾಗ, ಸಾಮಾನ್ಯವಾಗಿ ಮೂರು ರೀತಿಯ ಪರಿಣಾಮಗಳಿಂದ ಜಾನುವಾರುಗಳು ಸಾವನ್ನಪ್ಪುತ್ತವೆ. ಮೊದಲನೆಯದು ಹೃದಯಸ್ಥಂಬನ; ಎರಡನೆಯದಾಗಿ ನರಮಂಡಲದ ಮೇಲಿನ ಪರಿಣಾಮ ಮತ್ತು ಮೂರನೆಯದಾಗಿ ರಕ್ತ ಕಣಗಳ ಒಡೆಯುವಿಕೆ. ಹಾವು ಕಡಿದಾಗ ಅವುಗಳ ಕಡಿತದ ಸ್ಥಳದಲ್ಲಿ ಹಲ್ಲುಗುರುತು ಆಗುತ್ತದೆ ಎನ್ನುತ್ತಾರೆ. ಆದರೆ, ಜಾನುವಾರುಗಳ ಕಾಲುಗಳ ಮೇಲೆ ಕಡಿತವುಂಟಾದಾಗ ಅಲ್ಲಿ ಹಲ್ಲನ ಗುರುತು ಅಥವಾ ರಕ್ತಸ್ರಾವ ಕಾಣಿಸದು.

ಹಾವಿನ ವಿಷಬಾಧೆ ವಿವಿಧ ಅಂಶಗಳನ್ನು ಅವಲಂಬಿಸಿದೆ. ಹಾವು ಕಡಿತದ ಸ್ಥಳದಲ್ಲಿ ಇರುವ ವಿಷದ ಅಂಶ, ಪ್ರಾಣಿಯ ಗಾತ್ರ, ಕಡಿದ ಹಾವಿನ ಜಾತಿ, ಕಡಿತದ ಜಾಗ, ಕಡಿತಕ್ಕೊಳಗಾದ ಜಾನುವಾರು ಇತ್ಯಾದಿ. ಒಂದೇ ಹಾವು ಹಲವಾರು ಜಾನುವಾರುಗಳನ್ನು ಕಡಿಯುವ ಸಾಧ್ಯತೆ ಇದ್ದಾಗ, ಮೊದಲು ಕಡಿತಕ್ಕೊಳಗಾದ ಜಾನುವಾರಿನಲ್ಲಿ ಬಹಳ ವಿಷವು ಒಳಸೇರುವುದರಿಂದ ಅದರಲ್ಲಿ ವಿಷಭಾಧೆ ಸಹಜವಾಗಿಯೇ ಜಾಸ್ತಿ. ನಂತರ ಕಡಿತಕ್ಕೆ ಒಳಗಾಗುವ ಜಾನುವಾರುಗಳಲ್ಲಿ ವಿಷದ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದರಿಂದ ಅವುಗಳಿಗೆ ಪ್ರಾಣಾಪಾಯ ಕಡಿಮೆ. ಶರೀರ ತೂಕ ಜಾಸ್ತಿ ಇರುವ ಪ್ರಾಣಿಗಳಾದ ದನ ಮತ್ತು ಎಮ್ಮೆಗಳಲ್ಲಿ ವಿಷಬಾಧೆ ಉಂಟಾಗಲು ವಿಷದ ಪ್ರಮಾಣ ಜಾಸ್ತಿಯಾಗಿ ಶರೀರಕ್ಕೆ ಸೇರಬೇಕು. ಯಾವ ಜಾತಿಯ ಹಾವು ಕಚ್ಚಿದೆ ಎನ್ನುವುದೂ ಬಹಳ ಮುಖ್ಯ, ಏಕೆಂದರೆ ನಾಗರಹಾವು ಮತ್ತು ಕಾಳಿಂಗಸರ್ಪದ ಕಡಿತದಲ್ಲಿ ಸಾವು ಕೂಡಲೇ ಸಂಭವಿಸುತ್ತದೆ.

ಹಾವು ಕಡಿತದ ಲಕ್ಷಣಗಳು ಜಾನುವಾರುವಿನಲ್ಲಿ ಕೆಲವು ನಿಮಿಷಗಳಿಂದ ಪ್ರಾರಂಭವಾಗಿ ಕೆಲವು ಘಂಟೆಗಳವರೆಗೆ ಇರಬಹುದು. ಕಡಿತದ ಸ್ಥಳದಲ್ಲಿ ತೀವ್ರವಾದ ಉರಿಯೂತವಿರಬಹುದು. ರಕ್ತ ಹೆಪ್ಪುಗಟ್ಟುವಿಕೆಯ ತೊಂದರೆಯಿಂದ ಕಡಿದ ಸ್ಥಳದಿಂದ ರಕ್ತ ಸೋರುತ್ತ ಇರಬಹುದು. ಕೆಲವು ಜಾನುವಾರುಗಳಲ್ಲಿ ಹಲ್ಲು ಕಡಿಯುವುದು, ಜೊಲ್ಲು ಸುರಿಸುವುದು, ಉಸಿರಾಟದ ತೊಂದರೆ ಮತ್ತು ಒದ್ದಾಡುವಿಕೆಯ ಲಕ್ಷಣಗಳು ಕಾಣಿಸಬಹುದು. ಆದರೆ, ಬಹಳಷ್ಟು ಜಾನುವಾರುಗಳು ತೀವ್ರತರವಾದ ವಿಷಸರ್ಪದ ಕಡಿತಕ್ಕೆ ಒಳಗಾದರೆ ಯಾವುದೇ ವಿಷಬಾಧೆಯ ಲಕ್ಷಣಗಳನ್ನೂ ತೋರಿಸದೆ ತೀರಿಕೊಳ್ಳಬಹುದು. ನರಮಂಡಲದ ಉದ್ರೇಕಕ್ಕೆ ಒಳಗಾದ ಜಾನುವಾರುಗಳು ಪಾರ್ಶ್ವವಾಯು ಪೀಡೆಯಿಂದ ಬಳಲಬಹುದು. ಕಣ್ಣು ಗುಡ್ಡೆಗಳ ತಿರುಗಿಸುವಿಕೆ, ಹೊಟ್ಟೆ ಉಬ್ಬರ, ನಡೆದಾಡಲು ತೊಂದರೆ ಮತ್ತು ಕುರುಡುತನ ಇತ್ಯಾದಿ ಲಕ್ಷಣಗಳೂ ಸಹ ಕಾಣಿಸಬಹುದು. ತಿಂದ ವಸ್ತುಗಳನ್ನು ವಾಂತಿ ಮಾಡಿಕೊಳ್ಳುವಿಕೆಯೂ ಸಹ ಬಹಳ ಸಾಮಾನ್ಯ.

ಜಾನುವಾರುಗಳಲ್ಲಿ ಹಾವು ಕಡಿತವನ್ನು ಪತ್ತೆಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಕೆಲವು ಸಂದರ್ಭಗಳಲ್ಲಿ ಹಾವಿನ ಪೊರೆ ಅಥವಾ ರೈತರೇ ಹಾವನ್ನು ಸಾಯಿಸಿ ತಂದಾಗ ಮಾತ್ರ ನಿಖರವಾಗಿ ಇಂತಹ ಹಾವಿನ ವಿಷಬಾಧೆ ಎಂದು ಹೇಳಬಹುದು. ಇದಲ್ಲದೇ ಕಡಿತದ ಗುರುತು, ರಕ್ತ ಒಸರುವಿಕೆ ಮತ್ತು ಕಡಿತದ ಸ್ಥಳದಲ್ಲಿನ ತೀವ್ರವಾದ ಊತವೂ ಸಹ ವಿಷಬಾಧೆಯ ಪತ್ತೆಗೆ ಸಹಕರಿಸಬಲ್ಲವು. ಅಲ್ಲದೇ ಇಂತಹದೇ ವಿಷಬಾಧೆಯ ಲಕ್ಷಣಗಳನ್ನು ಉಂಟುಮಾಡುವ ವಿವಿಧ ಕಾಯಿಲೆಗಳಾದ ಚಪ್ಪೆ ರೋಗ, ನರಡಿ ರೋಗ, ಉಣ್ಣೆ ರೋಗ ಹಾಗೂ ಇತರೆ ವಿಷ ಸೇವನೆ ಇತ್ಯಾದಿಗಳನ್ನು ಗಮನದಲ್ಲಿಟ್ಟು ರೋಗ ಪತ್ತೆಹಚ್ಚಬೇಕಾಗುತ್ತದೆ.

ಜಾನುವಾರುಗಳಲ್ಲಿ ಹಾವು ಕಡಿತ ಉಂಟಾಗಿದೆ ಎಂದು ತಿಳಿದಾಗ ನಾವು ಅನುಸರಿಸಬೇಕಾದ ಕ್ರಮಗಳು:
1.ಹಾವು ಕಡಿತ ಎಂದು ಗೊತ್ತಾದರೆ, ಗಾಬರಿಗೊಳ್ಳದೆ ಪ್ರಥಮ ಚಿಕಿತ್ಸಾ ಕ್ರಮವನ್ನು ಅನುಸರಿಸಬೇಕು. ಜಾನುವಾರಿಗೆ ಯಾವುದೇ ಉದ್ರೇಕವಾಗದಂತೆ ಪ್ರಶಾಂತವಾಗಿರಿಸಲು ಪ್ರಯತ್ನಿಸಬೇಕು.
2.ಹಾವು ಕಾಲಿಗೆ ಕಚ್ಚಿದ್ದ ಪಕ್ಷದಲ್ಲಿ, ವಿಷವು ಶರೀರಕ್ಕೆ ಸೇರದಂತೆ ಕಚ್ಚಿದ ಸ್ಥಳದಿಂದ 2-4 ಇಂಚು ಮೇಲೆ ಬಿಗಿಯಾಗಿ ಕಟ್ಟು ಹಾಕಬೇಕು. ಆದರೆ, ಕೊಳಕು ಮಂಡಲ ಅಥವಾ ಇನ್ಯಾವುದೇ ಕೊಳೆಯುವಿಕೆಯನ್ನುಂಟುಮಾಡುವ ಹಾವುಗಳ ಕಡಿತದಲ್ಲಿ ಈ ಕ್ರಮವನ್ನು ಅನುಸರಿಸಬಾರದು. ಇದರಿಂದ ಕೊಳೆಯುವಿಕೆ ಹೆಚ್ಚಾಗುವ ಸಂಭವ ಜಾಸ್ತಿ ಇರುತ್ತದೆ.
3.ಹಾವು ಕಡಿದ ಜಾಗವನ್ನು ಸೋಪು ಹಚ್ಚಿ ಚೆನ್ನಾಗಿ ತೊಳೆಯಬೇಕು ಮತ್ತು ಮನೆಯಲ್ಲಿ ಲಭ್ಯವಿರುವ ನಂಜುನಿವಾರಕ ಮುಲಾಮನ್ನು ಹಚ್ಚಬೇಕು.
4.ಹಾವು ಕಚ್ಚಿದ ಸ್ಥಳದಲ್ಲಿ ಅರಿಶಿನ ಮತ್ತು ಲೋಳೆಸರದ ಸಮಪ್ರಮಾಣದ ಮಿಶ್ರಣ ಮಾಡಿ ಹಚ್ಚಬೇಕು.
5.ತಜ್ಞ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು. ತಜ್ಞ ಪಶುವೈದ್ಯರು ಹಾವು ಕಡಿತಕ್ಕೆ, ಕಡಿದ ಹಾವನ್ನು ಗಮನಿಸಿ ಸೂಕ್ತ ನಂಜುನಿವಾರಕ ಔಷಧಿ, ನೋವು ನಿವಾರಕಗಳು, ರಕ್ತ ಹೆಪ್ಪುಗಟ್ಟದಿರಲು ಸೂಕ್ತ ಚುಚ್ಚುಮದ್ದು ಇತ್ಯಾದಿಗಳನ್ನು ಬಳಸಿ ಜೀವರಕ್ಷಣೆಗೆ ಪ್ರಯತ್ನಿಸುತ್ತಾರೆ.
6.ಮನುಷ್ಯರ ಚಿಕಿತ್ಸೆಗೆ ಬಳಸಬಹುದಾದ ವಿವಿಧ ಹಾವುಗಳ ವಿಷಪ್ರತಿನಿರೋಧಕ ಚುಚ್ಚುಮದ್ದನ್ನೂ ಸಹ ಎಚ್ಚರದಿಂದ ಬಳಸಬೇಕಾಗುತ್ತದೆ. ಏಕೆಂದರೆ ಇವು ಪ್ರಾಣಿಗಳಲ್ಲಿ ಅಲರ್ಜಿಯನ್ನುಂಟುಮಾಡುವ ಸಂಭವಗಳು ಇರುತ್ತವೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ರೈತರು ತಮ್ಮ ಜಾನುವಾರುಗಳನ್ನು ಮೇಯಲು ಬಿಡುವ ಸ್ಥಳದಲ್ಲಿ ಹಾವುಗಳ ವಾಸಸ್ಥಾನವಾದ ಬಿಲಗಳು, ಹುಲ್ಲುಗಾವಲುಗಳು, ಇಲಿಗಳ ವಾಸಸ್ಥಾನ ಇತ್ಯಾದಿಗಳು ಇಲ್ಲವೆಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಮತ್ತು ಜಾನುವಾರುಗಳು ಹಾವು ಕಡಿತಕ್ಕೆ ಒಳಗಾದಾಗ ಧೈರ್ಯಗೆಡದೇ ಪ್ರಥಮಚಿಕಿತ್ಸಾ ಕ್ರಮಗಳನ್ನು ಅನುಸರಿಸಿದರೆ ಹಾವು ಕಡಿತಕ್ಕೆ ಒಳಗಾದ ಜಾನುವಾರುಗಳ ಪ್ರಾಣ ಕಾಪಾಡಿಕೊಳ್ಳಬಹುದು.
ಕಡಲ ಹಾವುಗಳು : ಉಷ್ಣ ಹಾಗೂ ಸಮಶೀತೋಷ್ಣವಲಯಗಳ ಸಮುದ್ರ ಪ್ರದೇಶದಲ್ಲಿ ವಾಸಿಸುವ ಅತ್ಯಂತ ವಿಷಪುರಿತ ಬಗೆಯವು. ಇವು ನಾಗರಹಾವುಗಳ ಸಂಬಂಧಿ ಹೈಡ್ರೋಫಿಡೀ ಕುಟುಂಬಕ್ಕೆ ಸೇರಿದವು. ಏಷ್ಯ ಮತ್ತು ಆಸ್ಟ್ರೇಲಿಯಗಳ ತೀರಪ್ರದೇಶದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಒಂದು ಜಾತಿಯ ಕಡಲ ಹಾವು ಆಫ್ರಿಕದ ಪುರ್ವತೀರಪ್ರದೇಶದಲ್ಲೂ ಕಂಡುಬಂದಿದೆ. ಹಾಗೆಯೇ ಮತ್ತೊಂದು ಉತ್ತರ ಅಮೆರಿಕದ ಪಶ್ಚಿಮತೀರಪ್ರದೇಶದಲ್ಲಿ ಕಂಡುಬಂದಿದೆ. ಅಟ್ಲಾಂಟಿಕ್ ಸಾಗರದಲ್ಲಿ ಇವುಗಳ ಸುಳಿವಿಲ್ಲ.
ಇವು ಜಲಜೀವನಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಂಡಿವೆ. ದೋಣಿಯ ಹುಟ್ಟಿನಂತೆ ಮಾರ್ಪಟ್ಟಿರುವ ಚಪ್ಪಟೆಯಾದ ಬಾಲ. ಕವಾಟಗಳಿಂದ ಕೂಡಿದ ಮೂಗಿನ ಹೊಳ್ಳೆಗಳು ಮತ್ತು ಮೊಂಡಾದ ನಾಲಗೆ-ಇವು ಜಲಜೀವನದ ಪರಿಹೊಂದಾಣಿಕೆಗಳು. ತಮ್ಮ ಉಪ್ಪು ನೀರಿನ ಪರಿಸರಕ್ಕೆ ಅನ್ವಯಿಸಿದಂತೆ ಇವುಗಳ ಮೂಗಿನಲ್ಲಿ ನಾಸಾ ಗ್ರಂಥಿ ಬೆಳೆದು ಹೆಚ್ಚಿನ ಉಪ್ಪನ್ನು ವಿಸರ್ಜಿಸುತ್ತದೆ. ಈಜುವುದರಲ್ಲಿ ಪ್ರಾವೀಣ್ಯ ಪಡೆದಿರುವ ಇವು ಭೂಮಿಯ ಮೇಲೆ ಹರಿದಾಡಲು ಅಸಮರ್ಥವಾಗಿವೆ. ನೀರಿನಲ್ಲಿದ್ದಾಗ ನೀರು ದೇಹವನ್ನು ಪ್ರವೇಶಿಸದಂತೆ ಮೂಗಿನ ಹೊಳ್ಳೆಗಳನ್ನು ಕವಾಟಗಳು ಮುಚ್ಚುತ್ತವೆ. ಸಾಮಾನ್ಯವಾಗಿ ತೀರಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದರೂ ಇವು ದಡದಿಂದ ಬಹು ದೂರ ಈಜಿಹೋಗಬಲ್ಲುವು. ದಾಳಿಕಾರ ಪ್ರವೃತ್ತಿ ಇವುಗಳ ಹುಟ್ಟುಗುಣವಲ್ಲ. ಸಮುದ್ರತೀರದಲ್ಲಿ ಈಜಾಡುವವರಿಗೆ ಸಾಮಾನ್ಯವಾಗಿ ಇವು ಹಿಂಸೆ ಮಾಡುವುದಿಲ್ಲ. ಆಕಸ್ಮಾತ್ತಾಗಿ ಹಿಡಿದರೆ ಅಥವಾ ಢಿಕ್ಕಿ ಹೊಡೆದರೆ ಕಚ್ಚುವುದುಂಟು. ಇವಕ್ಕೆ ಪತಂಗಗಳಂತೆ ಬೆಳಕು ಬಲು ಇಷ್ಟ.. ರಾತ್ರಿಯ ವೇಳೆ ಕಡಲ ತೀರದಲ್ಲಿ ಲಾಂದ್ರವನ್ನಿಟ್ಟರೆ ಅದರ ಬೆಳಕಿಗೆ ಆಕರ್ಷಿತವಾಗಿ ದಡಕ್ಕೆ ಬರುತ್ತದೆ. ಇವನ್ನು ಹಿಡಿಯುವವರು ಈ ವಿಧಾನವನ್ನು ಅನುಸರಿಸುತ್ತಾರೆ. ನ್ಯೂ ಗಿನಿಯಲ್ಲಿ ಅಲ್ಲಿನ ಕಡಲ ಹಾವುಗಳು ದೊಡ್ಡ ದೊಡ್ಡ ನದಿಗಳನ್ನು ಪ್ರವೇಶಿಸುವುದುಂಟು. ಬೆಸ್ತರು ನದಿಗಳಲ್ಲಿ ಮೀನು ಹಿಡಿಯುವಾಗ ಅವರ ಬಲೆಗಳಿಗೆ ಇವು ಬಿದ್ದರೆ ಅವರು ಹೆದರಿಕೆಯಿಲ್ಲದೆ ಇವನ್ನು ಹಿಡಿದು ನದಿಗೆ ಎಸೆದು ಬಿಡುತ್ತಾರೆ. ಚೀನಾ ದೇಶದಲ್ಲಿ ಚೀನೀಯರು ಇವನ್ನು ತಿನ್ನುವುದುಂಟು. ಕಡಲ ಹಾವಿನ ವಿಷದ ನಂಜು ನರಗಳ ಮೇಲೆ ಪರಿಣಾಮಕಾರಿಯಾಗಿದೆ. ಮುಂಬೈಯ ಹಾಫ್ಕಿನ್ ಇನ್ಸ್ಟಿಟ್ಯೂಟಿನಲ್ಲಿ ಇದರ ನಂಜನ್ನು ಶಮನಗೊಳಿಸುವ ಆಂಟಿವೆನಿನ್ ಅಥವಾ ಪ್ರತಿವಿಷವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಕಡಲ ಹಾವುಗಳ ಕುಟುಂಬದಲ್ಲಿ ಎರಡು ಉಪಕುಟುಂಬಗಳಿವೆ. 1 ಹೈಡ್ರೋಫಿನೀ. 2 ಲಾಟಿಕಾನಿನೀ. ಮೊದಲನೆಯ ಗುಂಪಿನವು ಜಲಜೀವನಕ್ಕೆ ಸಂಪುರ್ಣವಾಗಿ ಹೊಂದಿಕೊಂಡಿವೆ. ಅಲ್ಲದೆ ಅವು ತಮ್ಮ ಮೊಟ್ಟೆಗಳನ್ನು ಗರ್ಭಾಶಯದಲ್ಲಿಯೇ ಇಟ್ಟುಕೊಂಡು ಕಾವು ಕೊಟ್ಟು ಮರಿ ಮಾಡುತ್ತವೆ. ಆದರೆ ಎರಡನೆಯ ಗುಂಪಿನವು ಸಮುದ್ರದ ದಡಕ್ಕೆ ಬಂದು ಮೊಟ್ಟೆಗಳನ್ನಿಡುತ್ತವೆ. ಪೆಲಾಮಿಸ್ ಪ್ಲಾಟೂರಸ್ ಎಂಬ ಕಡಲ ಹಾವು ಹಿಂದೂ ಸಾಗರ ಮತ್ತು ಪೆಸಿಫಿಕ್ ಸಾಗರಗಳ ತೀರದಲ್ಲೆಲ್ಲ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಒಂದು ಮೀಟರು ಉದ್ದ ಬೆಳೆಯುತ್ತದೆ. ದೇಹ ಕಂದು ಅಥವಾ ಬೂದು ಬಣ್ಣವಾಗಿದ್ದು ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಭಾರತ ದೇಶದಲ್ಲಿ 8 ಜಾತಿ ಮತ್ತು 19 ಪ್ರಭೇದಗಳಿವೆ. ಕರಿಲಿಯ, ಲಾಟಿಕಾಡ, ಪ್ರೆಸ್ಕುಲೇಟ, ಎನ್ಹೈಡ್ರಿನ, ಹೈಡ್ರೋಫಿಸ್, ಲಪೆಮಿಸ್, ಮೈಕ್ರೋಸೆಫಾಲೋಫಿಸ್ ಮತ್ತು ಪೆಲಾಮಿಸ್ ಜಾತಿಯ ಕಡಲಹಾವುಗಳ ಪೈಕಿ ಕೊನೆಯ ಆರು ಜಾತಿಗಳು ಕನ್ನಡನಾಡಿನ ಕಡಲತೀರದಲ್ಲ್ಲಿ ಕಾಣಬರುತ್ತವೆ.

ಗುರುವಾರ, ನವೆಂಬರ್ 26, 2015

: Kannada books (ಕನ್ನಡ ಪುಸ್ತಕಗಳು)

Rajendra <a href="http://maheshuh.blogspot.in/2012/01/kannada-books.html?m=1">Blog: Kannada books (ಕನ್ನಡ ಪುಸ್ತಕಗಳು)</a>

ಕನ್ನಡ

ಕನ್ನಡ



ಕನ್ನಡ
Каннада.PNG
ಬಳಕೆಯಲ್ಲಿರುವ
ಪ್ರದೇಶಗಳು: ಕರ್ನಾಟಕ, ಭಾರತ, ಕೇರಳಕ್ಕೆ ಸೇರಿಹೋಗಿರುವ ಕಾಸರಗೋಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮುಂತಾದೆಡೆಗಳಲ್ಲಿಯೂ ಭಾರತದಿಂದ ಹೊರಗಿರುವ ಕೆನಡಾ, ಆಸ್ಟ್ರೇಲಿ ಯಾ, ಮಲೇಷಿಯಾ, ಸಿಂಗಾಪುರ‍,[೧] ಯು.ಕೆ., ಜರ್ಮನಿ, ಹಾಂಗ್‍ಕಾಂಗ್, ನ್ಯೂಜಿಲ್ಯಾಂಡ್, ಮೌರೀಷಿಯಸ್,[೨] ಯುನೈಟೆಡ್ ಅರಬ್ ಎಮಿರೇಟ್ಸ್,[೩] ಥಾಯ್‍ಲ್ಯಾಂಡ್.[೪] ಮುಂತಾದೆಡೆಗಳಲ್ಲಿಯೂ ಬದುಕಿರುವ ಜನಗಳು ಕನ್ನಡ ಭಾಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅಧಿಕೃತ ವಿವರಗಳು ಲಭ್ಯವಾಗಿವೆ.
ಒಟ್ಟು
ಮಾತನಾಡುವವರು: ೬೪ ದಶಲಕ್ಷ (೨೦೧೧), ಇವರಲ್ಲಿ ೫೫ ದಶಲಕ್ಷ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ.[೫][೬] 
ಶ್ರೇಯಾಂಕ: ೨೯
ಭಾಷಾ ಕುಟುಂಬ: ದ್ರಾವಿಡ ಭಾಷೆಗಳು
 ದಕ್ಷಿಣ ದ್ರಾವಿಡ
  ತಮಿಳು - ಕನ್ನಡ[೭]
   ಕನ್ನಡ – ಬಡಗ
    ಕನ್ನಡ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕರ್ನಾಟಕ, ಭಾರತ
ನಿಯಂತ್ರಿಸುವ
 ಪ್ರಾಧಿಕಾರ: ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು [೮]
ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan 
Kannadaspeakers.png

ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ.[೯] ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ. ಕದಂಬ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ [೧೦] ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ಹೆಚ್ಚಿನ ರಾಜಾಶ್ರಯ ಪಡೆಯಿತು.[೧೧][೧೨] ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.[೧೩]ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.


ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
1.ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
2.ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
3.ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.[೧೪]
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.
1.ಪ್ರಾಚೀನ ಹಳಗನ್ನಡ - ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ
2.ಹಳಗನ್ನಡ - ೭ರಿಂದ ೧೨ನೆಯ ಶತಮಾನದವರೆಗೆ
3.ನಡುಗನ್ನಡ - ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ
4.ಹೊಸಗನ್ನಡ - ೧೮ನೆಯ ಶತಮಾನದ ಆದಿಯಿಂದ ಈಚೆಗೆ
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.[೧೫][೧೬][೧೭][೧೮][೧೯] ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥವಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ. [೧೫]

ಸಂಸ್ಕೃತದ ಪ್ರಭಾವ
◾ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.[೨೦]
◾ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ. [೨೦][೨೧]
◾ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
[೨೨] ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.[೨೩]

ಸಾಹಿತ್ಯ
ಹಳಗನ್ನಡ
ತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ. [೨೪] ರಾಜಾ ನೃಪತುಂಗ ಅಮೋಘ ವರ್ಷ‍ ರಚಿಸಿದ ಕವಿರಾಜ ಮಾರ್ಗಂ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜಾ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. [೨೫][೨೬] ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ. [೨೫][೨೭] ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗುತ್ತವೆ.[೨೮]
ನಡುಗನ್ನಡ
◾ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ನಡುವಣ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಉಚ್ಛ್ರಾಯ ಕಾಲವಾಗಿತ್ತು. ಆ ಕಾಲದ ಅತ್ಯಂತ ಶ್ರೇಷ್ಠನೆನಿಸಿಕೊಂಡ ಕವಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿಯೊಂದಿಗೆ ವಿಶ್ವವಿಖ್ಯಾತನಾದನು. ಮಹಾಭಾರತವನ್ನು ಆಧರಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೊಳಗೊಂಡಿದೆ.[೨೯] ಈ ಕಾಲದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕವೂ ಸಾಮಾಜಿಕವೂ ಆದ ಪ್ರಭಾವ ಮೂರ್ಧನ್ಯಾವಸ್ಥೆಯಲ್ಲಿತ್ತು.[೩೦][೩೧][೩೨]
◾ಈ ಕಾಲದಲ್ಲಿ ರಾಜ್ಯಾಡಳಿತ ಮತ್ತು ಜಮೀನ್ದಾರಿಗೆ ಸಂಬಂಧಿಸಿದ ಮರಾಠಿ ಮತ್ತು ಹಿಂದಿ ಭಾಷೆಯ ಹಲವಾರು ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದುವು.[೩೩]
◾ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ವಿಜಯ ದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರೇ ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರ ಪದಗಳೆಂದು ಖ್ಯಾತವಾದ ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದರು. . ಅವುಗಳಲ್ಲಿ ಹೆಚ್ಚಿನವು ಇಂದಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಆದರಿಸಲ್ಪಡುವ ಕೃತಿಗಳಾಗಿವೆ.[೩೪] ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು. [೩೫]
◾ಇಲ್ಲಿ ಹೆಸರಿಸಲಾದ ಮತ್ತು ಇತರ ವೈಷ್ಣವ ಸಂತರು / ಹರಿದಾಸರು ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೂ ಆ ಮೂಲಕ ಕರ್ಣಾಟಕ ಸಂಗೀತಕ್ಕೂ ಶ್ರೇಷ್ಠವೆನಿಸಿದ ಕೊಡೂಗೆಗಳನ್ನು ನೀಡಿದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಕರ್ಣಾಟಕ ಸಂಗೀತದ ಪಿತಾಮಹ ಎಂದು ಖ್ಯಾತರಾದ ಪುರಂದರದಾಸರು.[೩೬][೩೭][೩೮]
ಹೊಸಗನ್ನಡ
◾ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. *೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು. [೩೯]
◾ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು.[೪೦]
◾ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೆ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. [೪೧]
◾ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರ ಅತ್ಯಂತ ಹೆಚ್ಚು ಸಲ ಕನ್ನಡ ಭಾಷೆಗೆ ದೊರೆಯಿತು. [೪೨] ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ [೪೩] ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ.

ಕನ್ನಡ ಉಪಭಾಷೆಗಳು
◾ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ, ಹವಿಗನ್ನಡ, ಅರೆಭಾಷೆ, ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ.[೪೪]
◾ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು.
◾ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಬಡಗ ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ೧೮೯೦ರಲ್ಲೇ ಉಪಯೋಗಿಸಲಾಗುತ್ತಿತ್ತು.[೪೫] ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ.

ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ
◾'ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು. (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ.
◾"ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ.
ಉದಾಹರಣೆಗೆ:
ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು
 ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
 ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ
 ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
 ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ
 ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
 ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ
 ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
 ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ
 ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು
 ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ
 ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ

ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು
 ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
 ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ
 ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ


ಭೌಗೋಳಿಕ ವ್ಯಾಪಕತೆ
◾ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಕೇರಳ, ಗೋವಾ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರೆ) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಕೊಲ್ಲಿ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ.
◾ಇವರಲ್ಲಿ ಹೊರದೇಶಗಳಲ್ಲಿ ವಾಸಿಸುತ್ತಿರುವವರು ಉದ್ಯೋಗ ನಿಮಿತ್ತ ಕರ್ನಾಟಕದಿಂದ ವಲಸೆ ಹೋದವರಾಗಿದ್ದಾರೆ. ಇಂದಿಗೆ ಕೇರಳದಲ್ಲಿರುವ ಕಾಸರಗೋಡು ೧೯೫೬ರ ಭಾಷಾವಾರು ಪ್ರಾಂತ್ಯ ವಿಂಗಡಣೆಗಿಂತ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು.

ಅಧಿಕೃತ ಮಾನ್ಯತೆ ಮತ್ತು "ಅಭಿಜಾತ ಭಾಷೆ (ಚೆನ್ನುಡಿ)"

ಕನ್ನಡದ ಬಾವುಟ
 
 
ಈ ಕನ್ನಡ ಬಾವುಟ ಕರ್ನಾಟಕ ಸರಕಾರದ ಅಧಿಕೃತ ಅಂಗೀಕಾರ ಮುದ್ರೆಯನ್ನು ಪಡೆದಿಲ್ಲ.
ಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೋದಿಸುತ್ತ ಕೇಂದ್ರ ಸರಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂಬ ಗೌರವವನ್ನಿತ್ತು ಆದರಿಸಿತು.[೪೬][೪೭]ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆಯಿತು.[೪೮]ಜುಲೈ 2011ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿತು.[೪೯]

ನಿಘಂಟು
ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. [೫೦] ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ. [೫೧]
ಮುಖ್ಯ ಲೇಖನ: ಕನ್ನಡ ಅಕ್ಷರಮಾಲೆ
ಕನ್ನಡ ಅಕ್ಷರಮಾಲೆಯಲ್ಲಿ 52 ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳೆರಡೂ ಕದಂಬ ಲಿಪಿಯಿಂದ ರೂಪುಗೊಂಡಂಥವು. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಇಂಗ್ಲೀಷಿನಂಥ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮಿ ಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದಿವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಯನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆನಿಂತಿರುವುದು ಗಮನಾರ್ಹ. ಪ್ರಪಂಚದಲ್ಲಿರುವ ೧೮ ಬಗೆಯ ಲಿಪಿಗಳಲ್ಲಿ ೮ ಅಕ್ಷರ ಲಿಪಿಗಳು. ಉಳಿದಂತೆ ಚಿತ್ರಲಿಪಿಯೇ ಮುಂತಾದುವುಗಳನ್ನು ಕಾಣಬಹುದು. ಭಾರತದಲ್ಲಿ ಅನೇಕ ಭಾಷೆಗಳವು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಲಿಪಿಗಳಾಗಿವೆ. ಪಾರ್ಸೋ-ಅರಬ್ಬಿ ಲಿಪಿಗಳೂ ಭಾರತದಲ್ಲಿ ರೂಢಿಯಲ್ಲಿವೆ. ಉದಾ: ಉರ್ದು, ಕಾಶ್ಮೀರಿ ಮತ್ತು ಪುಷ್ತು.
ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:


ಸ್ವರಗಳು
ಹ್ರಸ್ವ ಅ ಇ ಉ ಋ ಎ   ಒ  
ದೀರ್ಘ ಆ ಈ ಊ ೠ ಏ ಐ ಓ ಔ
ಯೋಗವಾಹಕಗಳು ಅಂ (ಅನುಸ್ವಾರ) ಅಃ (ವಿಸರ್ಗ)

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ) ಕ ಖ ಗ ಘ ಙ
ತಾಲವ್ಯ (ಚವರ್ಗ) ಚ ಛ ಜ ಝ ಞ
ಮೂರ್ಧನ್ಯ (ಟವರ್ಗ) ಟ ಠ ಡ ಢ ಣ
ದಂತ್ಯ (ತವರ್ಗ) ತ ಥ ದ ಧ ನ
ಓಷ್ಠ್ಯ (ಪವರ್ಗ) ಪ ಫ ಬ ಭ ಮ


ಅವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಗಳು‍ ಯ ರ ಱ ಲ ವ ಶ ಷ ಸ ಹ ಳ ೞ
ಹೀಗೆ ಒಟ್ಟು 52 ವರ್ಣಗಳು ಕನ್ನಡದಲ್ಲಿರುವಂಥವು.
ವರ್ಣ ವಿಂಗಡಣೆ
ವಿಭಜಿಸಲು ಸಾಧ್ಯವಿಲ್ಲದ ಧ್ವನಿಯನ್ನು ವರ್ಣವೆನ್ನಲಾಗುತ್ತದೆ ಮತ್ತು ಭಾಷೆಯ ಅತ್ಯಂತ ಕಿರಿಯ ಅಂಶವನ್ನು ಸ್ವರವೆಂದು ಕರೆಯಲಾಗುತ್ತದೆ. (ಉದಾಃ ವಸ್ತ್ರ = ವ್+ಅ+ಸ್+ತ್+ರ್+ಅ) ಸ್ವತಂತ್ರವಾಗಿ ಉಚ್ಚರಿಸಬಹುದಾದ ವರ್ಣಗಳನ್ನು ಸ್ವರಗಳೆಂದೂ ಇತರ ವರ್ಣಗಳ ಸಹಾಯದಿಂದ ಉಚ್ಚರಿಸಬಹುದಾದ ವರ್ಣಗಳನ್ನೂ ವ್ಯಂಜನಗಳೆಂದೂ ಕರೆಯಲಾಗುತ್ತದೆ.
ಸ್ವರಗಳ ವಿಧಗಳು
◾ಸ್ವರಗಳನ್ನು ಅವುಗಳ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.
◾ಹ್ರಸ್ವ ಸ್ವರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ.
ಉದಾಹರಣೆಗೆ: ಅ, ಇ, ಉ, ಋ, ಎ, ಒ
◾ದೀರ್ಘಸ್ವರಗಳ ಉಚ್ಚಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ.
ಉದಾಹರಣೆಗೆ: ಆ, ಈ, ಊ, ೠ, ಏ, ಐ, ಓ, ಔ
◾"ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.
ಉದಾಹರಣೆಗೆ: ಋಷಿ, ಋಜುವಾತು, ಋಣ, ಋತುಮಾನ
◾"ಐ" ಮತ್ತು "ಔ"ಗಳ ಸ್ವರೂಪ:
ಮೇಲಿನ ವರ್ಣಗಳು ಎರಡು ವಿಭಿನ್ನ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಯಲ್ಲಿ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಯಿಂದ ಆಗಿದ್ದು, ತಮ್ಮ ದೀರ್ಘ ಸ್ವರೂಪದಿಂದಲಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರುತ್ತವೆ.
ವ್ಯಂಜನದ ವಿಧಗಳು
ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ.
◾ಕ ಖ ಗ ಘ ಙ
◾ಚ ಛ ಜ ಝ ಞ
◾ಟ ಠ ಡ ಢ ಣ
◾ತ ಥ ದ ಧ ನ
◾ಪ ಫ ಬ ಭ ಮ
"ಯ"ಕಾರದಿಂದ "ಳ"ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.
◾ಯ ರ ಱ ಲ ವ ಶ ಷ ಸ ಹ ಳ ೞ
ಭಾರತದ ರಾಜ್ಯಗಳ ರಚನೆ ಮಾನದಂಡಗಳು ಭಾಷೆ [ ಮತ್ತು ರಾಜಕಾರಣಿಗಳು ಈ ದಿನಗಳಲ್ಲಿ ! ] . ಭಾರತ 1950 ರಲ್ಲಿ ಭಾಷಾವಾರು ಪ್ರಾಂತ್ಯಗಳು ರೂಪುಗೊಂಡವು ಅದೇ ವರ್ಷದ ಗಣರಾಜ್ಯವಾದ . ಮೈಸೂರು ರಾಜ್ಯವನ್ನು ದಕ್ಷಿಣ ಭಾರತದಲ್ಲಿ ಅಂತಹ ರಾಜ್ಯವಾಗಿದೆ .ಮೈಸೂರು ರಾಜ್ಯದ ರಾಜರು ಆಳ್ವಿಕೆ ಇದು ಪ್ರದೇಶದ ಪಟ್ಟು ವಿವಿಧ ಭಾಗಗಳಾಗಿ ತೆಗೆದುಕೊಳ್ಳುವ ಸ್ಥಾಪಿಸಲಾಯಿತು . ಈಗ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಎಂದು ಹಲವಾರು ಜಿಲ್ಲೆಗಳಿಗೆ , ಹೊಸ ರಾಜ್ಯದಲ್ಲಿ ಕರಗಿದ. ಹೊಸ ರಾಜ್ಯದ ಸ್ವತಃ ರಾಜರುಗಳ ರಾಜ್ಯವಾಗಿತ್ತು ಇದು ಮೈಸೂರು , ನಂತರ ಹೆಸರಿಸಲಾಯಿತು.
ಉತ್ತರ ಮತ್ತು ಹೈದರಾಬಾದ್ ಪ್ರದೇಶದ ಜನರು ಹೆಸರು ಮೈಸೂರು ಸ್ವೀಕರಿಸಲಿಲ್ಲ . ಈ ಪ್ರದೇಶದ ಜನರ ಹೆಸರು ಬದಲಾವಣೆ ಬೇಡಿಕೆ ಮಾಡಲಾಯಿತು . ದೀರ್ಘಕಾಲದ ಚರ್ಚೆಯ ನಂತರ ರಾಜ್ಯದ ಹೆಸರು ನವೆಂಬರ್ 1 , 1973 ರಂದು ಕರ್ನಾಟಕ ಬದಲಾಯಿಸಲಾಯಿತು .
ರಾಜ್ಯದ ಕೊನೆಯಲ್ಲಿ ದೇವರಾಜ ಅರಸು ನಂತರ ಮುಖ್ಯಮಂತ್ರಿ ಈ ಹೆಗ್ಗುರುತು ನಿರ್ಧಾರ ತೆಗೆದುಕೊಂಡಿತು . ಅಧಿಕೃತವಾಗಿ ಹೊಸ ರಾಜ್ಯದ ನವೆಂಬರ್ 1 ರಂದು ಜನಿಸಿದರು ಮತ್ತು ಈ ದಿನ ರಾಜ್ಯದ ಪ್ರತಿ ವರ್ಷ ಜನ್ಮದಿನವನ್ನು ಆಚರಿಸಲಾಗುತ್ತದೆ . ಈ ಜನಪ್ರಿಯವಾಗಿ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಕರೆಯಲಾಗುತ್ತದೆ . ರಾಜ್ಯೋತ್ಸವ " ಒಂದು ರಾಜ್ಯದ ಹುಟ್ಟಿದ " ಅರ್ಥ .
ಆರಂಭದಲ್ಲಿ ಹೆಸರು ಬದಲಾವಣೆ ಎಲ್ಲಾ ಮೂಲಕ ಅವರುಗಳಿಗೆ ಉತ್ತೇಜನ ನೀಡಲಾಯಿತು ಮಾಡಲಾಯಿತು . ಹೆಸರು ಕನ್ನಡ ಮತ್ತು ಕರ್ನಾಟಕದ ಏಕತೆಯ ಪ್ರಜ್ಞೆ ಬಡಿದೆಬ್ಬಿಸಿತು . ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಉತ್ಸಾಹ ಎಲ್ಲಾ ಆದರೆ ಅಲ್ಪಾಯುಷ್ಯದ ಯೂಫೋರಿಯಾ ಎಂದು ಎಲ್ಲಾ ಸಮಂಜಸ ಅನುಮಾನಗಳನ್ನು ಮೀರಿ ಸಾಬೀತಾಯಿತು ಇದೆ .
ಕರ್ನಾಟಕ ಆಹ್ಲಾದಕರ ಮನಸ್ಥಿತಿ ಇರುತ್ತದೆ ನವೆಂಬರ್ 1 ಬಂದು . ಈ ದಿನ ಸರ್ಕಾರಿ ರಜಾ. ಕೆಲವೇ ಕನ್ನಡ ಪಠಣ ಬೀದಿಗಳಲ್ಲಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಔಟ್ ಎಂದು . ಜನರು ಒಂದು ರಜಾ ಉಡುಗೊರೆ ಅನುಭವಿಸುವಿರಿ . ಅಗತ್ಯವಾಗಿ ಕರ್ನಾಟಕ ತಂಪಾದ ಮತ್ತು ಶಾಂತಿಯುತ ಅರ್ಥವಲ್ಲ . ರಾಜ್ಯದ ವರ್ಣ ಸಾಕ್ಷಿಯಾಗಿವೆ ಮತ್ತು ಸಮಾಜದ ಒಂದು ಭಾಗ ಈಗ ತದನಂತರ ಜರೆಯುತ್ತಾನೆ ಮಾಡಲಾಗಿದೆ . ಕಾರಣ: ಕನ್ನಡ ಮತ್ತು ತಮಿಳು , ತೆಲುಗು ಮತ್ತು ಹಿಂದಿ ಇತರ ಭಾಷೆಗಳ ಪ್ರಾಬಲ್ಯ ಬಳಸಿಕೊಂಡು ಜನರ ಸಂಖ್ಯೆಯನ್ನು ಅಭಾವವಿರುವ .
ಸರ್ಕಾರ ಸಾಕಷ್ಟು ಇರಿಸಿಕೊಳ್ಳಲು . ಇದು ಸಹ ಒಂದು ಸಮಿತಿ ಕನ್ನಡ Kavalu ಸಮಿತಿ ( ಕನ್ನಡ ವಾಚ್ ಡಾಗ್ ) ಎಂಬ ರೂಪುಗೊಂಡ 1993 ರಲ್ಲಿ ಕನ್ನಡ ಜಾಗೃತಿ ವರ್ಷ ವೀಕ್ಷಿಸಲು ಕರೆ ನೀಡಿದರು .
ನಾಯಿ ವೀಕ್ಷಿಸುತ್ತಿದ್ದಾರೆ? ಯಾವುದೇ ಭಾಷೆ ನಿಜವಾದ ಪ್ರೇಮಿಗಳು ವಿಷಾದಿಸುತ್ತಾನೆ. ನಾವು ಯಾವುದೇ ನಮಗೆ ವೀಕ್ಷಿಸಲು ಬಯಸುವುದಿಲ್ಲ , ನಾವು ನಮ್ಮ ಸ್ವಂತ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ... ಉಳಿದ ಹೇಳುತ್ತಾರೆ .
ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ರಾಜ್ಯದ ಕೊಡುಗೆ ಜನರಿಗೆ ನೀಡಲಾಗುತ್ತದೆ ಇದು ಪ್ರತಿ ವರ್ಷ , ಪ್ರಕಟಿಸಿತು .
1999 ರಿಂದ, ಬೆಂಗಳೂರು ಭಾರತದ ಅತ್ಯಂತ ಜನಪ್ರಿಯ ಹೊಂದಿದೆ ಮತ್ತು BangaloreIT.com ಎಂಬ ಐಟಿ ಪ್ರದರ್ಶನ envied .

ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.

ಕನ್ನಡ ಅಂಕೆಗಳು
ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.

ಕನ್ನಡ ಅಂಕೆಗ‍ಳು
ಇಂಡೋ ಅರೇಬಿಯನ್ ಅಂಕೆಗಳು
೦ ಸೊನ್ನೆ 0
೧ ಒಂದು 1
೨ ಎರಡು 2
೩ ಮೂರು 3
೪ ನಾಲ್ಕು 4
೫ ಐದು 5
೬ ಆರು 6
೭ ಏಳು 7
೮ ಎಂಟು 8
೯ ಒಂಬತ್ತು 9

ಚಿತ್ರಸಂಚಯ




ಹಲ್ಮಿಡಿ ಗ್ರಾಮದಲ್ಲಿರುವ ಹಲ್ಮಿಡಿ ಶಿಲಾಶಾಸನ (ಹಳಗನ್ನಡ) ಕ್ರಿ.ಶ. 450 (ಕದಂಬ ಸಾಮ್ರಾಜ್ಯ).




ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 578 (ಬಾದಾಮಿ ಚಾಲುಕ್ಯರು), ಬಾದಾಮಿ ಗುಹೆ #3.




ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. 726 AD, ತಲಕಾಡು, ರಾಜ ಶಿವಮಾರನದ್ದೋ ಶ್ರೀಪುರುಷನದ್ದೋ ಕಾಲ, (ಪಶ್ಚಿಮ ಗಂಗ ಸಾಮ್ರಾಜ್ಯ).




ಹಳಗನ್ನಡದಲ್ಲಿರುವ ಶಿಲಾಶಾಸನ, ಕ್ರಿ.ಶ. ಒಂಬತ್ತನೆಯ ಶತಮಾನ, (ರಾಷ್ಟ್ರಕೂಟ ಸಾಮ್ರಾಜ್ಯ) ದುರ್ಗೆಯ ಗುಡಿ, ಹಂಪಿ.




ಮಂಡ್ಯ ಜಿಲ್ಲೆಯ ಅಟಕೂರು ಶಿಲಾಶಾಸನ. (ಕ್ರಿ.ಶ. 949 ) ಎರಡು ಭಾಗಗಳ ರಚನೆ; ನಾಯಿ ಮತ್ತು ಕಾಡುಹಂದಿಯ ಪರಸ್ಪರ ಯುದ್ಧವನ್ನು ಚಿತ್ರಿಸುವ ಶಿಲಾಶಾಸನ ತಕ್ಕೋಳ ಯುದ್ಧದಲ್ಲಿ ಚೋಳ ಸಾಮ್ರಾಜ್ಯದ ಮೇಲೆ ರಾಷ್ಟ್ರಕೂಟರು ಜಯ ಸಾಧಿಸಿದುದನ್ನು ಸೂಚಿಸುತ್ತದೆ.




ಪಶ್ಚಿಮ ಚಾಲುಕ್ಯ ಒಂದನೆಯ ಸೋಮಶೇಖರನ ಬಳ್ಳಾರಿ ಜಿಲ್ಲೆಯ ಹಿರಿಯ ಹಡಗಲಿಯ ಕಲ್ಲೇಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕ್ರಿ. ಶ. 1057.




ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇವಸ್ಥಾನದಲ್ಲಿರುವ ಪಶ್ಚಿಮ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಕಾಲದ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ 1112.




ಹಾಸನ ಜಿಲ್ಲೆಯ ಅರಸಿಕೆರೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿರುವ ಹಳಗನ್ನಡ ಶಿಲಾಶಾಸನ, ಕಾಲ ಕ್ರಿ. ಶ.1220 (ಹೊಯ್ಸಳ ಸಾಮ್ರಾಜ್ಯ).




ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿರುವ ಕೃಷ್ಣದೇವರಾಯರ (ವಿಜಯನಗರ ಸಾಮ್ರಾಜ್ಯ) ಪಟ್ಟಾಭಿಷೇಕದ ಬಗೆಗಿನ ಕ್ರಿ. ಶ. 1509ರ ಶಿಲಾಶಾಸನ.




ಅಸಾಮಾನ್ಯ ಸೌಂದರ್ಯದಿಂದ ಶೋಭಿಸುವ ಯಳಂದೂರಿನಲ್ಲಿರುವ ಕ್ರಿ.ಶ. 1654ರ ಶಿಲಾಶಾಸನ.




ಹಲ್ಮಿಡಿ ಶಿಲಾಶಾಸನದ ಪ್ರತಿರೂಪ.

ಉಲ್ಲೇಖಗಳು

ಬುಧವಾರ, ನವೆಂಬರ್ 25, 2015

ಲಂಬಾಣಿ ಜನಾಂಗದ ದಿಪವಾಳಿ

fgfgyfrajenndraಬಾಪು ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ
 ಯಾರಿ ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ
 ಭೀಯಾ ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ...
ಅಪ್ಪ- ಅಮ್ಮ, ಸಹೋದರರ ಗುಣಗಾನ ಮಾಡಿ, ಅವರಿಗೆ ನಮಸ್ಕಾರ ಸಲ್ಲಿಸುವ ಈ ಹಾಡು ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪ್ರತಿ ಲಂಬಾಣಿ ತಾಂಡಾದ ಪ್ರತಿ ಮನೆಮನೆಗಳಲ್ಲೂ ದೀಪಾವಳಿ ಸಮಯದಲ್ಲಿ ಕೇಳಿಬರುತ್ತದೆ. ಹಿಂದು ಧರ್ಮದ ಬಹುತೇಕ ಎಲ್ಲ ಹಬ್ಬಗಳು ಮಹಿಳೆಯರಿಗೇ ಮೀಸಲು. ಆದರೆ ದೀಪಾವಳಿ ವಿಶೇಷ ಎಂದರೆ ಲಂಬಾಣಿ ತಾಂಡಾದ ಅವಿವಾಹಿತ ಹೆಣ್ಣುಮಕ್ಕಳಿಗಷ್ಟೇ ಇದು ಸಮರ್ಪಿತವಾಗಿರುವುದು.
ಇವರಿಗೆ ದೀಪಾವಳಿ ‘ದವಾಳಿ’ ಹಬ್ಬ. ಇದರ ವಿಶೇಷತೆ ಎಂದರೆ  ಹಬ್ಬದಲ್ಲಿ ಮದುವೆಯಾದವರಿಗೆ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ. ಯುವಕರಿಗೂ ಇಲ್ಲಿ ನಿಷಿದ್ಧ. ಒಂದು ವೇಳೆ ಯುವಕರು ಭಾಗವಹಿಸಿರುವುದು ಕಂಡುಬಂದರೆ ಅವರಿಗೆ ದಂಡವನ್ನೂ ವಿಧಿಸಲಾಗುವುದು.
ದೀಪಾವಳಿ ಅಮವಾಸ್ಯೆಯ ದಿನ ಲಕ್ಷ್ಮಿ ಪೂಜೆಯ ಮೊದಲು ಗೋಪೂಜೆ ನಡೆಯುತ್ತದೆ. ಅಮವಾಸ್ಯೆಯ ರಾತ್ರಿ ಯುವತಿಯರು ಸಿಂಗರಿಸಿಕೊಂಡು ಹರಳೆಣ್ಣೆ ದೀಪದ ಆರತಿಗಳನ್ನು ಹಚ್ಚಿಕೊಂಡು ತಾಂಡಾದ ನಾಯಕನ ಮನೆಗೆ ಹೋಗಿ ಆರತಿ ಬೆಳಗುತ್ತಾರೆ. ಆರತಿ ಢಾಕಣಿ (ಪಣತಿ)ಯಲ್ಲಿ ಎಲ್ಲರೂ ಕಾಣಿಕೆಯಾಗಿ ಹಾಕುತ್ತಾರೆ.
ಬಲಿಪಾಡ್ಯಮಿ ದಿನ ಸಾಂಪ್ರದಾಯಿಕ ಬಟ್ಟೆ ತೊಟ್ಟ ಯುವತಿಯರು ಹಾಗೂ ಬಾಲಕಿಯರು ಕಾಡಿನಲ್ಲಿ ಹೊನ್ನಂಬರಿ, ಅಣ್ಣಿ ಮೊದಲಾದ ಹೂವುಗಳನ್ನು ಸಂಗ್ರಹಿಸುತ್ತಾರೆ. ದಾರಿಯುದ್ದಕ್ಕೂ ಹಾಡು ಹೇಳುತ್ತಾ ನರ್ತಿಸುತ್ತಾರೆ. ದಾರಿ ಮಧ್ಯದಲ್ಲಿ ಸಿಗುವ ದೇವಿ ದೇವಾಲಯದಲ್ಲಿ ಕೂತು ಸಿಹಿತಿಂಡಿ ತಿನ್ನುತ್ತಾರೆ. ಬುಟ್ಟಿ ತುಂಬ ಹೂ ಕಿತ್ತುಕೊಂಡು ಸಂಜೆ ವೇಳೆಗೆ ಮನೆಗೆ ಹಿಂತಿರುಗುತ್ತಾರೆ.
ಈ ದಿನ ಪೂರ್ವಿಕರಿಗೆ ಎಡೆ ಹಾಕುವ ಸಂಪ್ರದಾಯ ನಡೆಯುತ್ತದೆ. ಈ ಆಚರಣೆಗೆ ‘ದಬುಕಾರ್‌’ ಎಂದು ಹೆಸರು. ಕಾಡು ಮೇಡುಗಳಿಂದ ತಂದ ಹೂಗಳನ್ನು ಮನೆಯಲ್ಲಿ ಹರಡುತ್ತಾರೆ. ಮನೆಯಲ್ಲಿ ಕೆಂಡ ತಯಾರಿಸಿ ಹಿರಿಯರನ್ನು ನೆನೆದು ಕೆಂಡಕ್ಕೆ ಲೋಬಾನೆ, ತುಪ್ಪ, ಹಿರಿಯರಿಗೆ ಇಷ್ಟವಾದ ತಿಂಡಿ, ಅಡುಗೆ ಪದಾರ್ಥಗಳನ್ನು ಹಾಕುತ್ತಾರೆ.
ಈ ಸಂದರ್ಭದಲ್ಲಿ ನಮ್ಮ ಜೀವನಾಧಾರವಾಗಿರುವ ಗಾಳಿ, ಬೆಳಕು, ಸೂರ್ಯ, ಚಂದ್ರ, ಪ್ರಕೃತಿಗಳನ್ನು ನೆನೆದು ಪೂಜೆ ನಡೆಯುತ್ತದೆ. ಯುವತಿಯರು ಗ್ರಾಮದ ಪ್ರತೀ ಮನೆಗೂ ತೆರಳಿ ದೀಪ ಬೆಳಗಿ ಬಾಳು ಬೆಳಕಾಗಲಿ ಎಂದು ಹರಸಿ ಬರುತ್ತಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿನ ಲಂಬಾಣಿ ತಾಂಡಾದವರು ಚಿಕ್ಕಮಕ್ಕಳನ್ನು ಹೂವಿನ ಬುಟ್ಟಿಯಲ್ಲಿ ಕೂಡಿಸಿ ಮೆರವಣಿಗೆ ಮಾಡುತ್ತಾರೆ.
ಗೊದ್ನು ಹಬ್ಬ ಆಚರಣೆ
 ಗ್ರಾಮದ ದೇವಸ್ಥಾನದ ಸಮೀಪದ ಜಾಗದಲ್ಲಿ ಗೊದ್ನು ಹಬ್ಬ ಆಚರಿಸಲಾಗುತ್ತದೆ. ಸಂಜೆ ಎತ್ತುಗಳ ಕೊರಳಿಗೆ ಕೊಬ್ಬರಿ ಬಟ್ಟಲು, ಹಣ ಕಟ್ಟಿ ಸಿಂಗರಿಸುತ್ತಾರೆ. ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿ ಮಾಡುವಂತೆ, ಈ ಎತ್ತುಗಳನ್ನು ಬೆದರಿಸಿ ಬಿಡುತ್ತಾರೆ. ಆ ಎತ್ತುಗಳ ಜೊತೆ ಸೆಣೆಸಾಟ ನಡೆಸಿ ಹಿಡಿದುಕೊಂಡು ಬಂದವರಿಗೆ ಬಹುಮಾನ ಉಂಟು.
ನೃತ್ಯದ ಸೊಬಗು
 ಇಲ್ಲಿ ಅವಿವಾಹಿತೆಯರೆಲ್ಲ ಸೇರಿ ನೃತ್ಯ ಮಾಡುವ ದೃಶ್ಯ ನೋಡುವುದೇ ಸೊಬಗು. ದೀಪಾವಳಿಯ ಬೆಳ್ಳಂಬೆಳಿಗ್ಗೆ ಈ ಯುವತಿಯರೆಲ್ಲ ಮೊದಲು ಮಡಿಯಿಂದ ಅಡುಗೆ ಮಾಡುವ ಒಲೆಗೆ ಪೂಜೆ ಸಲ್ಲಿಸುತ್ತಾರೆ. ಅಷ್ಟೊತ್ತಿಗಾಗಲೇ ಊರ ಗೌಡನ ಮಾಹಿತಿದಾರ ‘ಡಾಲ್ಯ’ ಹಲಗೆ ಬಡಿಯುತ್ತ ಊರ ತುಂಬ ಅಡ್ಡಾಡುತ್ತಾನೆ. ಇದರ ಉದ್ದೇಶ ಯುವತಿಯರೆಲ್ಲ ಹುಡುಗಿಯರು ಹಟ್ಟಿ ನಾಯಕರ ಮನೆಗೆ ಬರಬೇಕು ಎನ್ನುವುದು.
ಈ ಡಂಗುರದ ಸಂದೇಶ ಸಿಗುತ್ತಿದ್ದಂತೇ ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ನೃತ್ಯ ಆರಂಭಿಸುತ್ತಾರೆ. ಲಂಬಾಣಿ ದಿರಿಸಿನಲ್ಲಿ ನಡೆಯುವ ಆ ನೃತ್ಯದ ಸೊಬಗು ನೋಡಿಯೇ ಅನುಭವಿಸಬೇಕು. ಮೊದಲು ಗುಂಪು ಗುಂಪಾಗಿ ನೃತ್ಯ ಆರಂಭಿಸುವ ಈ ಯುವತಿಯರು ನಂತರ ಹೊನ್ನಾರಿಕೆ ಹೂವು ಬುಟ್ಟಿಯ ಜೊತೆ ತಿರುಗುತ್ತಾ ನರ್ತಿಸುತ್ತಾರೆ. ಇದಕ್ಕೆ ಸಾಥ್‌ ನೀಡಲು ಡೋಲು ಬಾರಿಸಲಾಗುತ್ತದೆ, ಉತ್ತೇಜನ ನೀಡಲು ಪಟಾಕಿ ಸಿಡಲಾಗುತ್ತದೆ. ಈ ವೈಭವ ಸುಮಾರು ಎರಡು, ಎಡರೂವರೆ ಗಂಟೆ ನಡೆಯುತ್ತದೆ.
ನೃತ್ಯ ಮುಗಿದ ಮೇಲೆ ಹಟ್ಟಿ ಗೌಡನ ಹೆಂಡತಿ ನೇತೃತ್ವದಲ್ಲಿ ಊರ ಹಿರಿಯರು ತಾಂಡಾದ ಈ ಯುವತಿಯರನ್ನು ಬೀಳ್ಕೊಡುತ್ತಾರೆ. ಮನೆಗೆ ಬರುವ ಈ ಯುವತಿಯರು ಗ್ರಾಮದಲ್ಲಿರುವ ವಿವಿಧ ದೇವಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ನಂತರ ಸೆಗಣಿಯ (ಗೋಧಾಣಿ) ಗುರ್ಚಿ ಮಾಡಿಕೊಂಡು ಐವರು ಯುವತಿಯ ಗುಂಪು ಗ್ರಾಮದ ಪ್ರತಿ ಮನೆಗೆ ತೆರಳುತ್ತದೆ.
ಅಲ್ಲಿ ಗುರ್ಚಿ ಇಟ್ಟು ನಂತರ ಸೆಗಣಿಯನ್ನು ಒಂದೆಡೆ ಸೇರಿಸಲಾಗುತ್ತದೆ. ಸಂಜೆ  ಆ ಸೆಗಣಿಯ ಗುಂಪಿಗೆ ಹಿಟ್ಟು, ಹಾಲು ಹಾಕಲಾಗುತ್ತದೆ. ರಾತ್ರಿ ತಾಂಡಾ ಮುಖ್ಯಸ್ಥ ನಾಯಕ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗುವ ಮೂಲಕ ಹಬ್ಬಕ್ಕೆ ಮಂಗಳ ಹಾಡಲಾಗುವುದು. ಮದುವೆ ನಿಶ್ಚಯ ಆದವರು, ಮದುವೆಗಾಗಿ ವರಾನ್ವೇಷಣೆಯಲ್ಲಿ ತೊಡಗಿದವರು ಬರುವ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳಲು ತಮಗೆ  ಅವಕಾಶ ಸಿಗುವುದಿಲ್ಲ ಎಂದು ನೆನೆದು ಕಣ್ಣೀರೂ ಸುರಿಸುತ್ತಾರ